ಸುದ್ದಿ360,ದಾವಣಗೆರೆ,ಜು.05: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರಕಾರಿ ನೌಕರರ ಮಕ್ಕಳಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಬಿ. ಪಲಾಕ್ಷಿ, ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90 ಹಾಗೂ ಅದಕ್ಕೂ ಹೆಚ್ಚು ಅಂಕ ಗಳಿಸಿರುವ ಸರಕಾರಿ ನೌಕರರ ಮಕ್ಕಳಿಗೆ ಕೇಂದ್ರ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸರಕಾರಿ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನೌಕರರು ತಮ್ಮ ಸೇವಾ ದೃಢೀಕರಣ ಪತ್ರ ಪಡೆದು, ಜಿಲ್ಲಾಧ್ಯಕ್ಷರಿಂದ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಿಸಿ, ಅಂಕಪಟ್ಟಿ, ಫೋಟೋ ಇತರ ದಾಖಲೆಗಳೊಂದಿಗೆ ಆನ್‌ಲೈನ್: https:bit.ly/ksgeaprathibapuraskara2022 ಮೂಲಕ ಜು.15ರೊಳಗೆ ಕೇಂದ್ರ ಸಂಘಕ್ಕೆ ಅರ್ಜಿ ಕಳಿಸಬೇಕು. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಆಯಾ ಜಿಲ್ಲೆಗಳಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಸಿ. ಗುರುಮೂರ್ತಿ 98446 45183, ಬಿ. ಪಾಲಾಕ್ಷಿ 86605 57116 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಕಾರಿಗಳಾದ ಪಿ.ಆರ್. ತಿಪ್ಪೇಸ್ವಾಮಿ, ಡಾ. ಡಿ. ಉಮೇಶ್, ಸಿ. ಗುರುಮೂರ್ತಿ ಇದ್ದರು.