ಪತ್ರಿಕಾ ವಿತರಕರು, ವಿತರಕರು ಮಕ್ಕಳು- ಪತ್ರಕರ್ತರ ಮಕ್ಕಳಿಗೂ ಉಚಿತ ಪ್ರವೇಶ
ಸುದ್ದಿ360 ಹುಬ್ಬಳ್ಳಿ, ಜು.04: ಧಾರವಾಡ ರಾಯಪುರ ದಲ್ಲಿರುವ ಡಾ. ಡಿ.ಜಿ. ಶೆಟ್ಟಿ ಎಜುಕೇಶನ್ ಸೊಸೈಟಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಡಿ ಜಿಎಂದು ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಪ್ರತಿಭಾವಂತ ಅಷ್ಟೇ ಅಲ್ಲದೆ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಪ್ರತಿ ವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರಲ್ಲದೆ, ರ‍್ಯಾಂಕ್ ಗಳನ್ನು ಪಡೆಯುತ್ತಿದ್ದಾರೆ ಎಂದರು.
ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಮುಂದಾಗಿದ್ದು ಸಂಸ್ಥೆಯಿಂದ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಪದವಿ ಕೋರ್ಸ್ ಗಳ ಬಿಕಾಂ, ಬಿಸಿಎ ಹಾಗೂ ಬಿಕಾಂ ಕಾರ್ಪೊರೇಟ್ ಸೆಕ್ಟರ್ಶಿಪ್ , ಎಂಕಾಂ ಕೋರ್ಸ್ ಗಳನ್ನು ನಡೆಸಲಾಗುತ್ತಿರುವುದಾಗಿ ಮಾಹಿತಿ ನೀಡಿದರು.
ಕಾಲೇಜಿನಲ್ಲಿ ಭೌತಶಾಸ್ತ್ರ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಯೋಗಾಲಯಗಳು ಗಣಕಯಂತ್ರ ಪ್ರಯೋಗಾಲಗಳು ಅತ್ಯಾಧುನಿಕ ಉಪಕರಣಗ ಳೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ.
ಬಿಕಾಂ ಕಾರ್ಪೊರೇಟ್ ಸೆಕ್ರೆಟರಿ ಪ್ರೊಫೆಷನಲ್ ಕೋರ್ಸ್
ಕಳೆದ 2003-04ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜನೆ ಯೊಂದಿಗೆ ಬಿಕಾಂ ಕಾರ್ಪೊರೇಟ್ ಸೆಕ್ರೆಟರಿ ಎಂಬ ಪ್ರೊಫೆಷನಲ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ. ಈ ಕೋರ್ಸ್ ಬಿಕಾಂಗಿಂತ ಭಿನ್ನವಾಗಿದ್ದು ವಿದ್ಯಾರ್ಥಿಗಳಿಗೆ ಉತ್ಪಾದಕ ನೀತಿ, ಕಾನೂನು ಸಲಹೆಗಾರಿಕೆ, ತೆರಿಗೆ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಾಮಾನ್ಯ ಆಡಳಿತ ನೀತಿ, ಕಂಪ್ಯೂಟರ್ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಈ ಕೋರ್ಸ್ ನಲ್ಲಿ ಕಲಿಸಿಕೊಡ ಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು ವಿದ್ಯಾರ್ಥಿನಿಯರಿಗೆ ಪಿಜಿ ವ್ಯವಸ್ಥೆ ಮಾಡಲಾಗುತ್ತಿದೆ. ಮೂಲಭೂತ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು ಮಹಾವಿದ್ಯಾಲಯದಿಂದ ಉತ್ತಮ ಶಿಕ್ಷಣ ನೀಡುವಲ್ಲಿ ಸಂಸ್ಥೆ ಮುಂದಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಎಸ್.ಬಿ. ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಯಾವುದೇ ಜಾತಿ ಸಮುದಾಯಕ್ಕೆ ಸೇರಿದವರಾದ ವಿದ್ಯಾರ್ಥಿಗಳಾಗಿದ್ದರು ಕೂಡ ಅವರಿಗೆ ಉಚಿತ ಶಿಕ್ಷಣ ನೀಡುವಲ್ಲಿ ಸಂಸ್ಥೆ ಮುಂದಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಸಾಲಿಮಠ, ಎಸ್.ಎನ್. ಭಟ್ ಇದ್ದರು.