ಬಸವತತ್ವ ಆಚರಣೆಯಿಂದ ಸುಖ-ಶಾಂತಿ: ಬಸವಪ್ರಭು ಶ್ರೀ

ಸುದ್ದಿ360 ದಾವಣಗೆರೆ, ಆ.26: ಬಸವತತ್ವ ಆಚರಣೆಯಿಂದ  ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆ ವಿರಕ್ತಮಠದಲ್ಲಿ ನೆಡೆದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಬಸವತತ್ವವನ್ನು ಪಾಲಿಸುವ ವ್ಯಕ್ತಿಯು ಶಾಂತಿಯುತವಾಗಿರುತ್ತಾನೆ ಕಾರಣ ಬಸವತತ್ವವು ಮಾನವೀಯತೆಯನ್ನು ಭೋದಿಸುತ್ತದೆ ಮಾನವೀಯತೆ ಇದ್ದಲ್ಲಿ ಶಾಂತಿ , ಪ್ರೇಮ , ಸಮಾನತೆಗಳು ನೆಲೆಸುತ್ತದೆ  ಹಾಗಾಗಿ ಎಲ್ಲರೂ ಬಸವತತ್ವವನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕು ಆಗ ಮಾತ್ರ ಜಗತ್ತಿಗೆ ಶಾಂತಿ ನೆಲೆಸುತ್ತದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಚೆನ್ನಬಸವಣ್ಣ ಇವರೆಲ್ಲರೂ ಮಹಾನ್ ಶರಣರಾಗಿದ್ದಾರೆ. ಸಮಸಮಾಜವನ್ನು 12 ನೇ ಶತಮಾನದಲ್ಲಿ ಕಟ್ಟಿದ್ದಾರೆ ಇವರ ಪರಿಚಯವನ್ನು ಯುವ ಪೀಳಿಗೆಗೆ ತಿಳಿಸಬೇಕು ಅವರ ಆದರ್ಶಗಳನ್ನು ಪಾಲಿಸಲು ಪ್ರೇರಣೆ ತುಂಬಬೇಕು. ಇದು ಈಗಿನ ತುರ್ತು ಕಾರ್ಯವಾಗಿದೆ ಎಂದರು.

ಸಹಜವಾಗಿಯೇ ಮಕ್ಕಳಿಗೆ ವಿಶಾಲವಾದ ಮನೋಭಾವ ಇರುತ್ತದೆ ಮುಂದೆ ದೊಡ್ಡವರಾಗುತ್ತಾ ಸಣ್ಣತನವು ಸೇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಹಾಗಾಗಿ ಬಸವತತ್ವವು ಎಲ್ಲರನ್ನೂ ಪ್ರೀತಿಸುತ್ತದೆ ಗೌರವಿಸುತ್ತದೆ ಇಂತಹ ಬಸವತತ್ವವನ್ನು ಪ್ರಚಾರ ಮಾಡುವ ಕಾರ್ಯವನ್ನು ಶ್ರೀಮಠದಿಂದ ನಿರಂತರವಾಗಿ ಮಾಡಲಾಗುತ್ತಿದೆ. ಬಸವಣ್ಣನವರು ಹೇಳಿದ  ಕಾಯಕ, ದಾಸೋಹ , ಶಿವಯೋಗ, ಸಮಾನತೆ, ಮಾನವೀಯತೆ, ವೈಚಾರಿಕತೆಗಳನ್ನು ನಾವು ಪಾಲಿಸಬೇಕು ಆಗ ಮಾತ್ರ ಎಲ್ಲರಿಗೂ ಕಲ್ಯಾಣವಾಗುತ್ತದೆ. ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯ ನಮಗೆ ಆದರ್ಶ ಅಂತಹ ಕಲ್ಯಾಣ ರಾಜ್ಯದ ಸದಾಶಯಗಳು ಇಂದಿನ ಸಂವಿಧಾನದಲ್ಲಿವೆ ಎಂದು ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ 50 ಕ್ಕೂ ಹೆಚ್ಚಿನ ಮಕ್ಕಳು ಬಸವಾದಿ ಶರಣರ ವೇಷಭೂಷಣಗಳಲ್ಲಿ ಕಂಗೊಳಿಸಿದರು. ಡಾ.ಶಿಮುಶ ಕಾಲೇಜು ಪ್ರಾಂಶುಪಾಲರಾದ ರೋಷನ್ , ವಿರಕ್ತಮಠ ಸದಸ್ಯರಾದ ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶಪ್ಪ ಇತರರು ಇದ್ದರು.

ಬಸವಾದಿ ಶರಣರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ಮಕ್ಕಳ ಪಟ್ಟಿ.
admin

admin

Leave a Reply

Your email address will not be published. Required fields are marked *

error: Content is protected !!