ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ

ಸುದ್ದಿ 360, ವಿಜಯನಗರ,ಜೂ16: ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ 25 ಜನರು ಗಾಯಗೊಂಡಿದ್ದಾರೆ.

ಹೊಸಪೇಟೆಯಿಂದ ಬಳ್ಳಾರಿ ಕಡೆ ಚಲಿಸುತ್ತಿದ್ದ ಸರಕಾರಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯತನ ಅಪಘಾತಕ್ಕೆ ಕಾರಣ ಎನ್ನಲಾಗಿದೆ‌.

 ಅಪಘಾತದಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡ ಕೆಲವರನ್ನ ಕೂಡಲೇ ಹೊಸಪೇಟೆಯ ತಾಲೂಕು ಆಸ್ಪ್ರತ್ರೆಯಲ್ಲಿ ದಾಖಲಿಸಲಾಗಿದೆ.. ಗಾಯಗೊಂಡವರಲ್ಲಿ ಬಹುತೇಕರು ಕಾಲೇಜು ವಿಧ್ಯಾರ್ಥಿಗಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸಣ್ಣಪುಟ್ಟ ಗಾಯಗೊಂಡವರು ರಸ್ತೆಯ ಪಕ್ಕದಲ್ಲಿ ಕೂತು ನೋವಿನಿಂದ ಕಣ್ಣಿರು ಹಾಕುತ್ತಿದ್ದಾರೆ. ಸ್ಥಳಿಯರು ಆಂಬ್ಯುಲೆನ್ಸ್ ಕರೆಮಾಡಿದ್ದು  ಗಾಯಗೊಂಡವರನ್ನ  ಹೊಸಪೇಟೆಯ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಣ್ಣಪುಟ್ಟ ಗಾಯಗಳಾದವರಿಗೆ ಸಮೀಪದ ಗಾದಿನಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಹೊಸಪೇಟೆಯ ಗ್ರಾಮೀಣಾ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!