ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ

ಸುದ್ದಿ360 ದಾವಣಗೆರೆ, ಜೂ.29:  ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ  ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರೆದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಪ್ರತಿಭಟನೆ ನಡೆಸಿತು.

ಇಲ್ಲಿನ  ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ 60 ವರ್ಷ ವಯಸ್ಸಾಗಿ ಬಿಡುಗಡೆಗೊಳಿಸುತ್ತಿರುವ ಬಿಸಿಯೂಟ ತಯಾರಕರಿಗೆ ರೂ. 1.50 ಲಕ್ಷ ಇಡುಗಂಟು ನೀಡಬೇಕು. ಮತ್ತು ಮುಂದಿನ ದಿನಗಳಲ್ಲಿ ಇದು ಅನ್ವಯವಾಗಬೇಕು. 2 ಲಕ್ಷ ರೂ. ಅಪಘಾತ ಪರಿಹಾರ ಜಾರಿಗೊಳಿಸಬೇಕು. ಕೆಲಸದ ಸಂದರ್ಭದಲ್ಲಿ ಜರುಗುವ ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಸುಲಭ ವಿಧಾನ ಅನುಸರಿಸಬೇಕು. ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳು ವೇತನ ನೀಡಬೇಕು. ಮತ್ತು ಹಾಲಿ ನಿಯಮದಂತೆ ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ನೀಡಬೇಕು ಎಂಬ ಬೇಡಿಕೆಗಳ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂ. ಮಳಲಕೆರೆ ಜಯಮ್ಮ, ಕಾಂ. ಜ್ಯೋತಿಲಕ್ಷ್ಮೀ, ಕಾಂ.ಪದ್ಮಾವತಿ, ಕಾಂ. ಆವರಗೆರೆ ಚಂದ್ರು, ಕಾಂ. ಸಿ.ರಮೇಶ್, ಕಾಂ. ವನಜಾಕ್ಷಮ್ಮ, ಕಾ. ಸರೋಜ, ಪರಶುರಾಮ್, ಭೀಮವ್ವ, ಲಕ್ಷ್ಮೀ, ಯಶೋಧಮ್ಮ, ಸುಮ, ಇಂದ್ರಮ್ಮ, ನಾಗರತ್ನ, ಹೇಮಾ ಸೇರಿದಂತೆ ಹಲವಾರು ಬಿಸಿಯೂಟ ತಯಾರಕರು,   ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!