ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಅವಘಡ

ಸುದ್ದಿ360, ಬೆಳಗಾವಿ ಜು.14:  ಜಿಲ್ಲೆಯ ಸಂಕೇಶ್ವರ ಪಟ್ಟಣದ ಜನರಲ್ ಸ್ಟೋರ್ ಒಂದರಲ್ಲಿ ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಗಾಂಧಿಚೌಕ ನೆಹರು ರಸ್ತೆಯಲ್ಲಿರುವ ಅರವಿಂದ್ ಕುಲಕರ್ಣಿ ಅವರಿಗೆ ಸೇರಿದ ಸೆಂಟರಲ್ ಜನರಲ್ ಸ್ಟೋರ್ ಗೆ ಬೆಳಗಿನ ಜಾವ 5.30ರ  ಸುಮಾರಿಗೆ  ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿದೆ.  ಬೆಂಕಿ ಕ್ರಮೇಣ ಪಕ್ಕದ ಕಿರಾಣಿ ಅಂಗಡಿ ಹಾಗೂ ಮನೆಗೂ  ವ್ಯಾಪಿಸಿದೆ. ಆದರೆ ತಕ್ಷಣ ಸ್ಥಳೀಯರ ಗಮನಕ್ಕೆ ಬಂದು, ಸ್ಥಳೀಯರ ಸಮಯ ಪ್ರಜ್ಞಯಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳೀಯರು ತಕ್ಷಣ  ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಲಕರ್ಣಿಯವರು ಅವರು ಪಟಾಕಿ ವ್ಯಾಪಸ್ಥರಾಗಿದ್ದು, ಅಂಗಡಿಯಲ್ಲಿ ಗ್ರಾಹಕರಿಗೆ ಸ್ಯಾಂಪಲ್ ತೋರಿಸಲೆಂದು ಪಟಾಕಿ ಹಾಗೂ ಮದ್ದುಗಳನ್ನು ಇಟ್ಟಿದ್ದು ಅವು ಸ್ಫೋಟಗೊಂಡಿದೆ. ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ಪಟಾಕಿ ಇಲ್ಲದೇ ಇದ್ದುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಯಾವುದೇ ರೀತಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸಂಕೇಶ್ವರ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ  ಪಿಎಸ್ಐ ಗಣಪತಿ ಕೊಂಗನೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!