ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು –ಬೈಕ್ ಸವಾರನಿಗೆ ಗಂಭೀರ ಗಾಯ

ಸುದ್ದಿ360 ಚಿಕ್ಕಮಗಳೂರು, ಆ.5 : ಜಿಲ್ಲೆಯ ಕೊಪ್ಪ ತಾಲೂಕಿನ  ಶಾಂತಿಪುರ ಬಳಿಯ ರಾಜ್ಯ ಹೆದ್ದಾರಿ 27ರಲ್ಲಿ ರಿಟ್ಜ್ ಕಾರೊಂದು ಬೈಕ್ ಗೆ ಗುದ್ದಿರುವುದಲ್ಲದೆ ಮುಂದುವರೆದು ಮನೆಗೆ ನುಗ್ಗಿದ ಪರಿಣಾಮ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಪಲ್ಸರ್ ಬೈಕ್ ಸವಾರನಿಗೆ ಕಾರು ಗುದ್ದಿದ ಪರಿಣಾಮ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರು ನುಗ್ಗಿದ  ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು, ಮನಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಲ್ಲಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

Leave a Comment

error: Content is protected !!