‘ಭವತಾರಿಣಿ’ಯಿಂದ ‘ದೇವವನ’ -1000 ಗಿಡ ನೆಡುವ ಮಾದರಿ ಕಾರ್ಯಕ್ರಮ

ಸುದ್ದಿ360, ದಾವಣಗೆರೆ, ಜು.15: ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಭವತಾರಿಣಿ ಸಂಸ್ಥೆಯು ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ “ದೇವವನ” ಎಂಬ ವಿನೂತನ ಮಾದರಿ ಕಾರ್ಯಕ್ರಮ ಜರುಗಿತು.

1000 ಗಿಡಗಳನ್ನು ನೆಡುವ ಕಾರ್ಯಕ್ರಮ ಇದಾಗಿತ್ತು. ನಗರದ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಅವರು ಉದ್ಘಾಟಿಸಿದರು.  ಜು.10ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಾವು, ಹಲಸು, ಮತ್ತಿ, ನೆಲ್ಲಿ  ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಡಲಾಗಿದೆ ಎಂದು ಭವತಾರಿಣಿ ಟ್ರಸ್ಟ್ ‘ನ ಮುಖ್ಯಸ್ಥರಾದ ಶಾರದಾ ಡಿ.ಆರ್ ಮತ್ತು ಚಂದ್ರಮೋಹನ್ ತಿಳಿಸಿದರು.

ಏನಿದು ದೇವವನ?

ಭಗವಂತನು ಭೂಮಿಯಲ್ಲಿ ಎಲ್ಲಾ ಜೀವಿಗಳಿಗೂ ಆಶ್ರಯವನ್ನು ನೀಡಿದ್ದಾನೆ. ಆದರೆ ಇಂದಿನ ಮನುಷ್ಯ ದುರಾಸೆಯಿಂದ ಕಾಡನ್ನು ಕಡಿದು ಪಶುಪಕ್ಷಿಗಳ ವಾಸ ಸ್ಥಾನವನ್ನು ನಾಶ ಮಾಡಿದ್ದಾನೆ‌. ಹಾಗಾಗಿ ನಗರ ಪ್ರದೇಶಗಳಲ್ಲಿ ಒತ್ತೊತ್ತಾಗಿ ಗಿಡಗಳನ್ನು ನೆಟ್ಟು ಪಕ್ಷಿ ಕ್ರಿಮಿಕೀಟಗಳಿಗೆ ಆಸರೆ ನೀಡುವ ಪುಟ್ಟ ವನಗಳನ್ನು ದೇವವನ ಎಂದು ಕರೆಯುತ್ತೇವೆ.

-ಶಾರದಾ ಡಿ.ಆರ್‌, ಭವತಾರಿಣಿ ಟ್ರಸ್ಟ್

ದಾವಣಗೆರೆಯ ಹೃದಯ ಭಾಗದಲ್ಲಿ ಈ ಗಿಡಗಳನ್ನು ನೆಡಲಾಗಿದ್ದು ನಗರದ ವಾಯುಮಾಲಿನ್ಯ ತಡೆದು ಪಕ್ಷಿಗಳಿಗೆ ಆಸರೆಯಾಗುವ ತಾಣ ಇದಾಗಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ  ಏಕನಾಥ್,‌ ಧರೆ ಸಂಸ್ಥೆಯ ಮುಖ್ಯಸ್ಥರಾದ ವೃಷಾಂಕ ಭಟ್ , ಸ್ಥಳೀಯರು, ಕಾಲೇಜಿನ ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಎ‌.ಆರ್. ಜಾನಕೀರಾಮ್, ಮೇಘರಾಜ್, ಮಾಜಿ ಮೇಯರ್ ವೀರೇಶ್, ಮಹೇಂದ್ರಪ್ಪ, ಶೇಷಾಚಲ, ಕೃಷ್ಣಮೂರ್ತಿ, ರವಿ, ಸಾಯಿನಾಥ್ ಹಾಗೂ ಪವನ್ ಅವರು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!