ಸುದ್ದಿ360, ದಾವಣಗೆರೆ ಮಾ 10: ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಮಿತಿಮೀರಿದ ಭ್ರಷ್ಟಾಚಾರ ಕೃತ್ಯವನ್ನು ಖಂಡಿಸಿ, ನಿಸ್ಸಾಹಾಯಕ ಮಖ್ಯಮಂತ್ರಿಗಳು ಇದರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಅಗ್ರಹಿಸಿ ಆಮ್ ಆದ್ಮಿ ಪಕ್ಷ ಜಿಲ್ಲಾ ಘಟಕ ಮಾನ್ಯ ರಾಜ್ಯಪಾಲರಿಗೆ ಜಿಲ್ಲಾ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಇಂದು ನಗರದ ಜಯದೇವ ಸರ್ಕಲ್ ನಲ್ಲಿ ಜಮಾವಣೆಗೊಂಡ ಎಎಪಿ ಕಾರ್ಯಕರ್ತರು ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಮತ್ತು ಭ್ರಷ್ಟಾಚಾರದಲ್ಲಿ ನಿರತರಾದವರನ್ನು ರಕ್ಣಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಘೋಷೆಣೆಗಳನ್ನು ಕೂಗುತ್ತ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿ ಪ್ರತಿಭಟನೆನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಎಪೆ ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ, ಶಾಸಕ ಮಾಡಾಳು ವಿರೂಪಾಕ್ಷಪ್ಪ ತಾವು ಅಧ್ಯಕ್ಷರಾಗಿದ್ದ ಕೆಎಸ್ ಡಿಎಲ್ ಸಂಸ್ಥೆಯಲ್ಲಿ ರಾಸಾಯನಿಕ ಸರಬರಾಜು ಒಪ್ಪಂದದಲ್ಲಿ ತಮ ಮಗನ ಮೂಲಕ ಭ್ರಷ್ಟಾಚಾರ ಎಸಗಿರುವುದು ಜಗಜ್ಜಾಹೀರಾದರೂ ಸಹ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿರುವುದು ಖಂಡನೀಯ ಎಂದರು.
ಗುತ್ತಿಗೆದಾರರ ಸಂಘವು ಮೊದಲಿನೊಂದಲೂ ಮಾಡಿಕೊಂಡು ಬಂದ 40 ಪರ್ಸೆಂಟ್ ಕಮೀಷನ್ ಆರೋಪಕ್ಕೆ ಈ ಪ್ರಕರಣ ಪ್ರಭಲ ಸಾಕ್ಷಿಯಾಗಿದೆ. ಆರು ದಿನಗಳು ತಲೆಮರೆಸಿಕೊಂಡಿದ್ದ ವಿರುಪಾಕ್ಷಪ್ಪನವರು ಒಂದೇ ದಿನದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದ ಕೆಲವೇ ಕ್ಷಣಗಳಲ್ಲಿ ಚನ್ನಗಿರಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸುತ್ತಾರೆ. ಜೈಲು ಪಾಲಾಗಬೇಕಿದ್ದವರಿಗೆ ಸರ್ಕಾರದಿಂದ ರಾಜಾತಿಥ್ಯ ನೀಡಲಾಗಿದೆ. ಸಾಕ್ಷಿಗಳನ್ನು ನಾಶಪಡಿಸಿ, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ ಸಿಕ್ಕಿರುವ ಪವಿತ್ರ ಅಧಿಕಾರವು ದುರ್ಬಳಕೆಯಾಗುತ್ತಿದೆ. ಆದ್ದರಿಂದ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಆದಿಲ್ ಖಾನ್, ರವೀಂದ್ರ ಕೆ, ಸಿದ್ಸಪ್ಪ, ಶಬೀರ್ ಅಹ್ಮದ್, ವೈ ಎನ್ ಮಂಜುನಾಥ್, ಗಣೇಶ್ ದುರ್ಗದ, ಬಸವರಾಜ್, ಆಯಿಷಾ, ಜಯಣ್ಞ, ಗೋವಿಂದರಾಜು, ಶ್ರೀಧರ್ ಪಾಟಿಲ್, ಕಲ್ಲೇಶ್, ಪ್ರೊ. ಧರ್ಮನಾಯಕ್, ಸಮೀರ್, ರೋಹಿತ್ ಇತರರು ಇದ್ದರು.