ಮಡಿಕೇರಿಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪನದ ಅನುಭವ

ಸುದ್ದಿ360 ಮಡಿಕೇರಿ ಜು.2: ತಾಲೂಕಿನ ಪರಾಜೆ ಗ್ರಾಮದಲ್ಲಿ ಶನಿವಾರ ರಾತ್ರಿ 8.25ರ ಸುಮಾರಿಗೆ ಭೂಮಿಯಿಂದ ಭಾರೀ ಪ್ರಮಾಣದ ಶಬ್ಧ ಕೇಳಿ ಬಂದಿದ್ದು, ಗ್ರಾಮಸ್ಥರನ್ನು ಭಯಬೀತಗೊಳಿಸಿದೆ.

ಭೂಕಂಪನದ ಭಯದಿಂದ ಮನೆಯೊಳಗಡೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಇಲ್ಲಿನ ಚೆಂಬು, ಸಂಜಾಜೆ, ಗೂನಡ್ಕ ಭಾಗಗಳಲ್ಲಿ ಈ ಶಬ್ಧ ಕೇಳಿ ಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಇದು ಭೂಕಂಪನ ಹೌದೋ ಇಲ್ಲೋ ಎಂದು ಇನ್ನು ಸ್ಪಷ್ಟಪಡಿಸಿಲ್ಲ.

admin

admin

Leave a Reply

Your email address will not be published. Required fields are marked *

error: Content is protected !!