ಸುದ್ದಿ360 ದಾವಣಗೆರೆ, ಆ. 10: ಇದೇ ಆಗಸ್ಟ್ 13, 14 ಮತ್ತು 15ರಂದು ಭಾರತ ದೇಶ ಸ್ವತಂತ್ರ ಪಡೆದು 75 ವರ್ಷಗಳು ತುಂಬುತ್ತಿರುವ ಈ ಶುಭ ಸಂದರ್ಭದಲ್ಲಿ ದೇಶದ ಅಮೃತ ಮಹೋತ್ಸವದ ಸಂಕೇತವಾಗಿ ದಿನಾಂಕ: 13ರ ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 15 ರ ಸಂಜೆ 6:00 ಗಂಟೆವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸುವಂತಹ ಅವಕಾಶವನ್ನು ಪ್ರತಿಯೊಬ್ಬರಿಗೂ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಪಿಸಿಕೊಟ್ಟವೆ. ಇದು ದೇಶ ಅಭಿಮಾನದ ಪ್ರಶ್ನೆ ಅಷ್ಟೇ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ – ಬಲಿದಾನ ಮಾಡಿದವರನ್ನು ಸ್ಮರಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಭಾರತೀಯನು ಮಾಡಬೇಕಾಗಿದೆ. ಇದಕ್ಕಾಗಿ ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ದಿನಾಂಕ 10.08.2022ರ ಬುಧವಾರ ಸಾಯಂಕಾಲ 5:00 ಗಂಟೆ ಯಿಂದ ಆಸಕ್ತರು ರಾಷ್ಟ್ರಧ್ವಜವನ್ನು ದರ 22-00 ರೂಪಾಯಿ ಗಳನ್ನು ಸಂದಾಯ ಮಾಡಿ ಪಡೆಯಬಹುದೆಂದು ಪತ್ರಿಕಾ ಪ್ರಕಟಣೆಯ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸಿದೆ. ದೇಶ ಅಭಿಮಾನದ ಧ್ವಜ ಆರೋಹಣ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ, ಬಿ. ವಾಮದೇವಪ್ಪ ಅವರು ಅಭಿಮಾನ ಪೂರ್ವಕವಾಗಿ ಜಿಲ್ಲೆಯ ಸಮಸ್ತ ದೇಶಾಭಿಮಾನಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ.
Related Posts
ಎಸಿಬಿ ಎಸ್ಪಿಯಾಗಿ ರಾಜೀವ್ ನೇಮಕ
ಸುದ್ದಿ360 ದಾವಣಗೆರೆ, ಜು.23: ಕಾರವಾರ ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ದಾವಣಗೆರೆ ಪೂರ್ವವಲಯದ ಎಸಿಬಿ ಎಸ್ಪಿಯಾಗಿ ನೂತನವಾಗಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ಡಿಎಸ್ಪಿ ಟ್ರೈನಿಂಗ್ ಮುಗಿಸಿ, ಉಡುಪಿಯಲ್ಲಿ…
ಜೂ.24ಕ್ಕೆ ಬೆಳ್ಳಿತೆರೆಯ ಮೇಲೆ ‘ತ್ರಿವಿಕ್ರಮ’
ನಾಯಕ ವಿಕ್ರಮ್, ನಾಯಕಿ ಆಕಾಂಕ್ಷಾ ಶರ್ಮಾ ಡ್ಯಾನ್ಸ್ ಗೆ ಯುವಪಡೆ ಫಿದಾ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಚಿತ್ರ ದಾವಣಗೆರೆ, ಜೂ.13: ದಾವಣಗೆರೆ ಜನ…
ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಪೂಜೆಗೆ ಆದ್ಯತೆ, ವ್ಯಕ್ತಿ ಪೂಜೆಗಲ್ಲ: ಎಸ್ ಎಸ್ ಮಲ್ಲಿಕಾರ್ಜುನ್
ಸಿದ್ದರಾಮಯ್ಯ ಅಮೃತಮಹೋತ್ಸವ ಅಭಿಮಾನಿಗಳಿಂದಲೇ ರೂಪುಗೊಂಡಿರುವ ಕಾರ್ಯಕ್ರಮ ಸುದ್ದಿ360, ದಾವಣಗೆರೆ, ಜು.18: ಸಿದ್ದರಾಮಯ್ಯ ಅವರು ನಮ್ಮ ಬಲವಂತಕ್ಕೆ ಮಣಿದು ಅಮೃತ ಮಹೋತ್ಸವಕ್ಕೆ ಒಪ್ಪಿ ಸಮ್ಮತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ…