ಮುಳುಗಿತೇ ಮಂಗಳೂರಿನ ಸ್ಮಾರ್ಟ್ !?

ಸುದ್ದಿ360 ಮಂಗಳೂರು, ಜೂ.30:  ಸ್ಮಾರ್ಟ್ ಸಿಟಿಯಾಗಲು ದಾಪುಗಾಲು ಇಟ್ಟಿರುವ ಮಂಗಳೂರು ನಗರ ಈ ಹಿಂದಿನ ವರ್ಷಗಳಂತೆಯೇ ಜಲಾವೃತಗೊಂಡಿದೆ.

ಮಳೆಗಾಲ ಪ್ರಾರಂಭವಾದರೆ ಮಂಗಳೂರು ಜಲಾವೃತಗೊಳ್ಳುವುದು ಕಳೆದ ಹಲವು ವರ್ಷಗಳಿಂದ ಸಾಮಾನ್ಯವಾಗಿಬಿಟ್ಟಿದೆ. ಬುದ್ದಿವಂತರ ಜಿಲ್ಲೆ ಮಂಗೂಳೂರಿನ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಚರಂಡಿ ವ್ಯವಸ್ಥೆಯೇ ಇಲ್ಲದ ಹೆದ್ದಾರಿಗಳು, ಅವೈಜ್ಞಾನಿಕ ಕಾಮಗಾರಿಗಳು, ಹೊಂಡದಿಂದ ಕೂಡಿದ ರಸ್ತೆಗಳು, ಮಳೆಗಾಲಕ್ಕೂ ಮುನ್ನ ನೀರು ಸರಾಗವಾಗಿ ಹರಿಯುವಂತೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುವ ಸಾರ್ವಜನಿಕರು ಮಂಗಳೂರಿನ  ಈ ಸ್ಥಿತಿಗೆ ಕಾರಣವಾಗಿದೆ.

ಮಂಗಳೂರಿನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಅಂಗಡಿ ಮುಂಗಟ್ಟು, ಮನೆಗಳಿಗೆ ಕೆಸರು ನೀರು ನುಗ್ಗಿದೆ. ರಸ್ತೆಗಳು ನದಿಯಂತೆ ಹರಿಯತೊಡಗಿವೆ.

ಪ್ರತಿ ಮಳೆಗಾಲದಲ್ಲಿಯೂ ವಿಶ್ವಪ್ರಸಿದ್ಧ ಮಂಗಳೂರು ಈ ರೀತಿಯಾಗಿ ಕೆಸರು ನೀರಿನಿಂದ ತುಂಬುವುದನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತವಾಗಲಿ, ಸಂಸದರಾಗಲಿ, ಶಾಸಕರಾಗಲೀ, ಪಾಲಿಕೆಯಾಗಲೀ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಜನ ರೋಸಿ ಹೋಗಿದ್ದಾರೆ.

Leave a Comment

error: Content is protected !!