ಯುವಕ ಕಾಣೆ; ಸಿಕ್ಕವರು ಮಾಹಿತಿ ನೀಡಲು ಕೋರಿಕೆ

ಸುದ್ದಿ360 ದಾವಣಗೆರೆ ಮಾ.14: ಇಲ್ಲಿನ ಬಸಾಪುರ ಗ್ರಾಮದ ಎ.ಕೆ. ಕಾಲೋನಿಯ ಯುವಕ ಸಂತೋಷ್ (23) ಕಾಣೆಯಾಗಿದ್ದು, ಯಾರಿಗಾದರೂ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಆತನ ತಂದೆ ಗೋವಿಂದಪ್ಪ ಕೋರಿದ್ದಾರೆ.

ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಕಳೆದ ಫೆ.4ರಂದು ದಾವಣಗೆರೆಗೆ ಬರುವುದಾಗಿ ತಿಳಿಸಿದ್ದು, ಬಾರದೆ ಇರುವುದರಿಂದ ಸಂಜೆ ಕರೆ ಮಾಡಿದರೆ ಅಂದಿನಿಂದ ಇಂದಿನವರೆಗೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಮ್ಮ ಸಂಬಂಧಿಯೊಬ್ಬರ ಮಗಳೊಂದಿಗೆ ಹೋಗಿದ್ದಾನೆಂದು ಮಾಹಿತಿ ಇದೆಯಾದರೂ ಆ ಬಗ್ಗೆ ಖಾತ್ರಿ ಇಲ್ಲ. ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ತಮ್ಮ ಪುತ್ರ ಕಂಡುಬಂದಲ್ಲಿ ಮಾಹಿತಿಗೆ ಮೊ: 9035106692/ 9632033385ಗೆ ಸಂಪರ್ಕಿಸುವಂತೆ ಗೋವಿಂದಪ್ಪ ಮನವಿ ಮಾಡಿದ್ದಾರೆ.

Leave a Comment

error: Content is protected !!