ಯುವಾ ಬ್ರಿಗೇಡ್ ಹರಿಹರ ತಂಡದಿಂದ ಹಳೆಯ ದೇವರ ಫೋಟೊಗಳ ವಿಸರ್ಜನೆ

ಸುದ್ದಿ360 ದಾವಣಗೆರೆ, ಆ.08:  ಯುವಾ ಬ್ರಿಗೇಡ್ ಹರಿಹರ ತಂಡ ಹರಿಹರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಕ್ಕಪಕ್ಕ ಬಿದ್ದಿದ್ದ ಹಳೆಯ ದೇವರ ಫೋಟೋಗಳನ್ನು ಸಂಗ್ರಹಿಸಿ ಸೂಕ್ತರೀತಿಯಲ್ಲಿ ವಿಸರ್ಜಿಸಿದ್ದಾರೆ.

ದೇವಸ್ಥಾನದ ಸುತ್ತಮುತ್ತಲು ಇಲ್ಲವೆ ಅಲ್ಲಿನ ಆಸುಪಾಸಿನ ಮರ ಇಲ್ಲವೇ ಯಾವುದಾದರೂ ಮರದ ಕೆಳಗಡೆ ಊನವಾದ ದೇವರ ಫೋಟೋಗಳು ಇಟ್ಟಿರುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಇದೂ ಸಹ ದೇವರಿಗೆ ಅಗೌರವ ತೋರಿಸಿದಂತೆಯೇ ಆಗುತ್ತದೆಯಲ್ಲದೆ. ಫೋಟೊಗೆ ಅಳವಡಿಸಲಾದ ಫ್ರೇಮ್ ಮತ್ತು ಗಾಜಿನ ಚೂರುಗಳು ಕಾಲ ಕ್ರಮೇಣ ಒಡೆದು ಸಾರ್ವಜನಿಕರಿಗೆ ಹಾನಿಯುಂಟು ಮಾಡುತ್ತದೆ. ಹೀಗೆ ಸಾರ್ವಜನಿಕರಿಗೆ ಆಗುವ ಹಾನಿ ಮತ್ತು ದೇವರ ಫೋಟೊಗಳು ವಿರೂಪಗೊಳ್ಳುತ್ತಿರುವುದನ್ನು ಗಮನಿಸಿದ ಯುವಾ ಬ್ರಿಗೇಡ್ ಹರಿಹರ ತಂಡ ಅವುಗಳನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಸರ್ಜನೆ ಮಾಡುವ ಮೂಲಕ ಪರಿಸರ ಕಾಳಜಿ ಮೆರೆದಿದೆ. ಯುವಾ ಬ್ರಿಗೇಡ್ನ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment

error: Content is protected !!