ರಂಗೋಲಿ ಸ್ಪರ್ಧೆ: ಹೆಸರು ನೋಂದಣಿ ದಿನಾಂಕ ವಿಸ್ತರಣೆ

ಸುದ್ದಿ360 ದಾವಣಗೆರೆ ಮಾ. 15: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಗೆ ಹೆಸರು ನೊಂದಾಯಿಸುವ ದಿನಾಂಕವನ್ನು 20-3-2023ರವರೆಗೆ ವಿಸ್ತರಿಸಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ.

ಮಾರ್ಚ್ 22 ರಂದು ಬುಧವಾರ ಯುಗಾದಿ ಹಬ್ಬದಂದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ  ಬೆಳಿಗ್ಗೆ 8 ರಿಂದ 12 ಗಂಟೆಯೊಳಗೆ ತಮ್ಮ ತಮ್ಮ ಮನೆಗಳ ಮುಂದೆಯೇ ತಮ್ಮ ತಮ್ಮ ಇಷ್ಟಾನುಸಾರ ವಿವಿಧ ಕಲಾ ಪ್ರಕಾರಗಳ ಉಚಿತ ರಂಗೋಲಿಯ ಈ ಸ್ಪರ್ಧೆ ಕುರಿತು ಹೆಚ್ಚಿನ ಮಾಹಿತಿಗೆ 9538732777 ಈ ಸನಿಹವಾಣಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್  ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!