ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸರಣಿ ಅಪಘಾತ – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ – 7 ಕಾರುಗಳು ಜಖಂ

ಸುದ್ದಿ360 ದೇವನಹಳ್ಳಿ, ಜ.6: ರಾಷ್ಟ್ರೀಯ ಹೆದ್ದಾರಿ7ರಲ್ಲಿ ಘಟಿಸಿರುವ ಸರಣಿ ಅಪಘಾತದಿಂದ ಕಿಲೋಮೀಟರ್‍ಗಟ್ಟಲ್ಲೇ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪೇಚಾಡಬೇಕಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಈ ಘಟನೆ ನಡೆದಿದ್ದು, ಕಾರುಗಳಿಗೆ ಯದ್ವಾ ತದ್ವಾ ಡಿಕ್ಕಿ ಹೊಡೆದಿರುವ ಟಿಪ್ಪರ್ ನಿಂದಾಗಿ 7 ಕಾರುಗಳ ಸರಣಿ ಅಪಘಾತಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.

ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ  ಎಸ್ಕೇಪ್ ಆಗಿದ್ದು, ಪೊಲೀಸರು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.

ಟಿಪ್ಪರ್ ಡಿಕ್ಕಿ ಹಿನ್ನಲೆ 7 ಕಾರುಗಳ ಮುಂಭಾಗ ಹಿಂಭಾಗ ಸಂಪೂರ್ಣ ಜಖಂ ಆಗಿದ್ದು, ಬಿಎಂಡಬ್ಲ್ಯೂ, ಥಾರ್, ಇಟಿಯೋಸ್ ಲಿವಾ, ಸ್ಯಾಂಟ್ರೋ, ಇಂಡಿಕಾ, ಸ್ವಿಫ್ಟ್  ಕಾರುಗಳು ಅಪಘಾತಕ್ಕೀಡಾಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!