ರಾಹುಲ್ ಗಾಂಧಿಗೆ ಇಡಿ ನೋಟಿಸ್ ಬಿಜೆಪಿ ಷಡ್ಯಂತ್ರ: ಸಿದ್ಧರಾಮಯ್ಯ

ಸುದ್ದಿ ೩೬೦, ಶಿವಮೊಗ್ಗ ಜೂ,15: ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಬಿಜೆಪಿಯಿಂದ ರಾಜಕೀಯ ಕಿರುಕುಳ ನೀಡಲಾಗುತ್ತಿದೆ. ರಾಹುಲ್ ಗಾಂಧಿಗೆ ಇಡಿ ನೋಟಿಸ್ ನೀಡಿರುವುದು ಬಿಜೆಪಿಯ ಷಡ್ಯಂತ್ರವಾಗಿದೆ. ಬಿಜೆಪಿ ರಾಜಕೀಯ ದ್ವೇಷ ಕಾರುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ 1938ರಲ್ಲಿ ನೆಹರೂ ಪ್ರಾರಂಭ ಮಾಡಿದ್ದು, ಈ ಪ್ರಕರಣದ ಬಗ್ಗೆ ಈ ಹಿಂದೆಯೇ ತನಿಖೆ ಮಾಡಿ, ರಿಪೋರ್ಟ್ ಹಾಕಿದ್ದರು. ಇದರಲ್ಲಿ ಈ ಹಿಂದೆ ರಾಜೀವ್ ಗಾಂಧಿ, ಈಗ ಸೋನಿಯಾ ಹಾಗೂ ರಾಹುಲ್ ಎಲ್ಲರೂ ಟ್ರಸ್ಟಿಗಳಾಗಿದ್ದಾರೆ. ವಿಚಾರಣೆಯಲ್ಲಿ ಇರೋದು ಕೇವಲ ರಾಜಕೀಯ ದುರುದ್ದೇಶ ಅಷ್ಟೇ. ಅವರ ರಾಜಕೀಯ ವರ್ಚಸ್ಸು ಕಡಿಮೆ ಮಾಡಲು ಹೀಗೆ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹಮಂತ್ರಿಗಳ ಅಧೀನಕ್ಕೆ ಬರುತ್ತಾರೆ. ಹೀಗಾಗಿ, ಪ್ರತಿಭಟನಾನಿರತರನ್ನು ಪೊಲೀಸರ ಮೂಲಕ ಕೇಂದ್ರ ಸರ್ಕಾರ ಅರೆಸ್ಟ್ ಮಾಡಿಸುತ್ತಿದೆ. ಇಡಿ, ಐಟಿ ಎಲ್ಲವೂ ಇಂದು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಎಂದರು.

ಡಿ.ಕೆ.ಸುರೇಶ್ ಅವರ ಓರ್ವ ಸಂಸದರು. ಜೊತೆಗೆ ದಿನೇಶ್ ಗುಂಡೂರಾವ್ ಸಚಿವರಾಗಿದ್ದವರು. ಅವರುಗಳ ಮೂಲಕ ಪೊಲೀಸರಿಂದ ಮ್ಯಾನ್ ಹ್ಯಾಂಡಲ್ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದು, ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಕಾನೂನು ಪ್ರಕಾರ ವಿಚಾರಣೆ ಮಾಡಲು ನನ್ನ ಅಡ್ಡಿಯಿಲ್ಲ. ರಾಜಕೀಯ ಯಾಕೆ..? ದೇಶದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇವರುಗಳೇ ಈ ಹಿಂದೆ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಟ ಮಾಡಿದ್ದರು. ಸ್ವತಂತ್ರ ಸಂಸ್ಥೆ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದರು.

admin

admin

Leave a Reply

Your email address will not be published. Required fields are marked *

error: Content is protected !!