ಸುದ್ದಿ360, ದಾವಣಗೆರೆ, ಜು.14: ಪೊಲೀಸ್ ಇಲಾಖೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಎಂ.ಪಾಟೀಲ್ ಆಸೆ ಇಂದು ಈಡೇರಿದೆ. ಅವಳ ಮೊಗದಲ್ಲಿ ಮಂದಹಾಸ ಮೂಡಿದೆ.
ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಆಸೆ/ಕೋರಿಕೆಯ ಮೇರೆಗೆ ಖಾಕಿ ಉಡುಪಿನಲ್ಲಿ ಇಂದು ಮಾನ್ಯ ಪೊಲಿಸ್ ಮಹಾ ನಿರೀಕ್ಷಕರವರು, ಪೂರ್ವ ವಲಯ, ದಾವಣಗೆರೆ ಕಛೇರಿಯಲ್ಲಿ ಡಾ. ಕೆ. ತ್ಯಾಗರಾಜನ್ ಐಪಿಎಸ್ ರವರೊಂದಿಗೆ ಪಕ್ಕದಲ್ಲಿ ಕೂತು ಬಾಲಕಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
ಖಾಕಿ ಉಡುಪಿನಲ್ಲಿ ಐಜಿಪಿ ತ್ಯಾಗರಾಜನ್ ಅವರ ಪಕ್ಕದಲ್ಲಿ ಕುಳಿತ ಸಾಧನಾ ಪೊಲೀಸ್ ಟೋಪಿ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ಖುಷಿಪಟ್ಟಿದ್ದಾಳೆ. ಐಜಿಪಿ ತ್ಯಾಗರಾಜನ್ ಮತ್ತು ಎಸ್ಪಿ ಸಿ.ಬಿ. ರಿಷ್ಯಂತ್ ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾಳೆ.
ಈ ಸಂದರ್ಭದಲ್ಲಿ ಸಾಧನಾ ತಾಯಿ ಮತ್ತು ಸಹೋದರಿಯರು ಇದ್ದು, ಇಲಾಖೆ ವಿಭಿನ್ನ ಸಾಮರ್ಥ್ಯದ ಸಾಧನಾ ಆಸೆ ಈಡೇರಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದ್ದಾರೆ.
ಮಾನವೀಯತೆ ಮೆರೆದು ಸಾಧನಾ ಆಸೆ ಪೂರೈಸಿದ ಪೊಲೀಸ್ ಇಲಾಖೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.