ವಿಶೇಷ ಪ್ರವಚನಮಾಲೆ ಸಮಾರೋಪ

ಸುದ್ದಿ360, ದಾವಣಗೆರೆ ಜು.11: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯಲ್ಲಿ ಸೋಮವಾರ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರವಚನ ನೀಡಿದರು.

ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡುತ್ತಾ ಮಾನವನ ಮನಸ್ಸು ಅದ್ಬುತವಾದ ಶಕ್ತಿ. ನಮ್ಮ ಮನಸ್ಸನ್ನು ಗೆದ್ದರೆ ಜಗತ್ತನ್ನು ಗೆದ್ದಂತೆ.  ಮನಸ್ಸಿನ ಗುಣ ಚಂಚಲ. ಮಂಗನಂತೆ ಜಿಗಿಯುವ ಸ್ವಭಾವವಿದೆ. ಅದನ್ನು ಧ್ಯಾನ , ಶಿವಯೋಗದಿಂದ ಪಳಗಿಸಿದಾಗ ನಮ್ಮ ಕೈವಶವಾಗುತ್ತದೆ ಎಂದು ಹೇಳಿದರು.

Leave a Comment

error: Content is protected !!