ಶರಣ ಸಂಸ್ಕೃತಿ: ವಿಶೇಷ ಪ್ರವಚನ ಸಮಾರೋಪ ಸಮಾರಂಭ (ಜು.11)

ಸುದ್ದಿ360, ದಾವಣಗೆರೆ, ಜು.10:  ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ, ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ, ಡಾ. ಶಿವಮೂರ್ತಿ ಮುರುಘಾಶರಣರ ಶೂನ್ಯಪೀಠಾರೋಹಣದ ತೃತೀಯ ದಶಮಾನೋತ್ಸವದ ಅಂಗವಾಗಿ ನಗರದ ಶಿವಯೋಗಾಶ್ರಮದಲ್ಲಿ ಜು.7ರಿಂದ ಪ್ರಾರಂಭವಾದ ವಿಶೇಷ ಪ್ರವಚನ ಮಾಲೆ ಜು.11ರಂದು ಸಮಾರೋಪಗೊಳ್ಳಲಿದೆ.

ವಿಶೇಷ ಪ್ರವಚನ ಸಮಾರೋಪ ಸಮಾರಂಭವು ಜು.11ರ ಸೋಮವಾರ ಸಂಜೆ 6-30 ಗಂಟೆಗೆ ಜರುಗಲಿದ್ದು, ಸಮಾರೋಪ ಸಮಾರಂಭದಲ್ಲಿ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರು ವಿಶೇಷ ಪ್ರವಚನ ನೀಡಲಿದ್ದಾರೆ. ಸಮಾರಂಭದಲ್ಲಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment

error: Content is protected !!