ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆದ ಹುಟ್ಟುಹಬ್ಬ ಆಚರಣೆ
ಸುದ್ದಿ360 ದಾವಣಗೆರೆ, ಜೂ.16: ಕಾಂಗ್ರೆಸ್ ಹಿರಿಯ ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪರ 92 ನೇ ಜನುಮದಿನದ ಪ್ರಯುಕ್ತ ಹೆಚ್ ಐವಿ ಸೋಂಕಿತ ಮಕ್ಕಳಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ವೈದ್ಯಕೀಯ ಉಪಕರಣಗಳನ್ನು ನೀಡಲಾಯಿತು.
ನಗರದ ಬಿಐಇಟಿ ರಸ್ತೆಯಲ್ಲಿನ ಎಂಸಿಸಿ ಬಿ ಬ್ಲಾಕ್ ನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಹಾಸ್ಪಿಟಲ್ ಬೆಡ್, ಬೆಡ್, ಸ್ಕೆತಸ್ಕೋಪ್, ಬಿಪಿ ಪರೀಕ್ಷಿಸುವ ಪರಿಕರ, ಆಕ್ಸಿಮೀಟರ್ ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ವಿಬಿಪಿ ಫೌಂಡೇಶನ್ ಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಜಿ. ಎಸ್. ಮಂಜುನಾಥ್ ಗಡಿಗುಡಾಳ್, ಶಾಮನೂರು ಶಿವಶಂಕರಪ್ಪರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೆಚ್ ಐ ವಿ ಸೋಂಕಿತ ಮಕ್ಕಳ ಅನುಕೂಲಕ್ಕಾಗಿ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದೇವೆ. ಈ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದ್ದೇವೆ ಎಂಬ ಧನ್ಯತಾಭಾವ ಇದೆ. ಶಿವಶಂಕರಪ್ಪಾಜಿಗೂ ಒಳ್ಳೆಯದಾಗಲಿ, ಮಕ್ಕಳಿಗೂ ಒಳಿತಾಗಲಿ. ನಮ್ಮೆಲ್ಲರ ಮಾರ್ಗದರ್ಶಕರಾದ ಶಿವಸಂಕರಪ್ಪರಿಗೆ ಮತ್ತಷ್ಟು ಆಯಸ್ಸು, ಆರೋಗ್ಯ ಕರುಣಿಸುವಂತಾಗಬೇಕು ಎಂದು ಹೇಳಿದರು.
ಇನ್ನು ವಿ. ಬಿ. ಪಿ. ಫೌಂಡೇಶನ್ ನ ಶಿವಕುಮಾರ್ ಮಾತನಾಡಿ, ನಾವು ಹೆಚ್ ಐವಿ ಸೋಂಕಿತ ಮಕ್ಕಳಿಗೆ ನೆರವು ನೀಡುವಂತೆ ಮಂಜುನಾಥ್ ಅವರಿಗೆ ಕೇಳಿಕೊಂಡಿದ್ದೆವು. ರಾತ್ರಿ ಹೊತ್ತಿನಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಕಷ್ಟ ಆಗುತಿತ್ತು. ವೈದ್ಯಕೀಯ ಸಲಕರಣೆಗಳು ನಮ್ಮಲ್ಲಿರಲಿಲ್ಲ. ಆದ್ರೆ ಅವರು ಸಹಾಯ ಮಾಡಿದ್ದಾರೆ. ಈ ಮೂಲಕ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಅಯ್ಯಪ್ಪ ಸ್ವಾಮಿಗೆ ಶಾಮನೂರು ಶಿವಶಂಕರಪ್ಪರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಯುತರಿಗೆ ಆಯುರಾರೋಗ್ಯ, ರಾಜಕೀಯದಲ್ಲಿ ಮತ್ತಷ್ಟು ಎತ್ತರ ಬೆಳೆಯಲಿ, ಆಯಸ್ಸು ಹೆಚ್ಚಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ವೇಳೆ ಸಾಮಾಜಿಕ ಕಾರ್ತಕರ್ತರಾದ ಬಿ. ಹೆಚ್. ಪರಶುರಾಮಪ್ಪ, ಕಾಂಗ್ರೆಸ್ ಮುಖಂಡರಾದ ಆಲೂರು ಜ್ಯೋತಿರ್ಲಿಂಗ, ಉಸ್ಮಾನ್ ಅಂಗಡಿ, ಭರತ್ ಮೈಲಾರಿ, ಮನು, ಉತ್ತರ ಕಾಂಗ್ರೆಸ್ ಅಧ್ಯಕ್ಷ ನವೀನ್ ಎಂ. ನಲ್ವಾವಾಡಿ, ದುಗ್ಗಳ್ಳಿ ಶಿವಕುಮಾರ್, ಆರ್. ಜಿ. ಧನೇಶ್, ಅಯನಹಳ್ಳಿ ಮಹಾಬಲೇಶ್, ಮಾಗನಹಳ್ಳಿ ಯುವರಾಜ್, ವಿನಯ್ ಜಿ. ಆರ್., ದಾನೇಶ್, ಶ್ರೀಕಂಠ, ಗುರುರಾಜ್, ಪ್ರಮೋದ್, ಪ್ರಜ್ವಲ್, ಬಸವರಾಜ್, ಶ್ರೀಕಂಠ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.