ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಮಾನಹಾನಿಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕೆ.ಎಸ್. ಬಸವರಾಜ್ ವಿರುದ್ಧ ಕ್ರಮಕ್ಕೆ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘ ಒತ್ತಾಯ

ಸುದ್ದಿ360 ದಾವಣಗೆರೆ ಮಾ.06: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಭಾವಚಿತ್ರವನ್ನು ಕೆ.ಎಸ್. ಬಸವರಾಜ್ (ಬಸವಂತಪ್ಪ) ಇವರು ಅಶ್ಲೀಲವಾಗಿ ಮಾರ್ಪಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸವಿತಾ ಬಾಯಿ ಮಲ್ಲೇಶ್ ನಾಯಕ್, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕಟ್ ಆಕಾಂಕ್ಷಿ

ಈ ಸಂದರ್ಭದಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್. ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರು ಸಾಕಷ್ಟು ಜನಪರ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ದರ್ಮ, ಜಾತಿ, ಜನಾಂಗದವರ ಕೃಪೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸವಿತಾಬಾಯಿ ಮಲ್ಲೇಶ್ ನಾಯಕ್ ಅವರ ಹೆಸರಿಗೆ ಚ್ಯುತಿ ಬರುವಂತೆ  ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಕೆ.ಎಸ್. ಬಸವರಾಜ್ ಅವರು ಸವಿತಾಬಾಯಿಯವರ ಭಾವಚಿತ್ರವನ್ನು ಅಶ್ಲೀಲವಾಗಿ ಚಿತ್ರಿಸಿ ಬಿತ್ತರಿಸುತ್ತಿದ್ದಾರೆ. ಕೆ.ಎಸ್.ಬಸವರಾಜ್ ಹಾಗೂ ಈ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಕಿಡಿಗೇಡಿಗಳ ಸೂಕ್ತ ತನಿಖೆಯಾಗಬೇಕು ಮತ್ತು ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಸಮಸ್ತ ಬಂಜಾರ ಸಮಾಜ ಈ ಮೂಲಕ ಮನವಿ ಮಾಡುವುದಾಗಿ ಅವರು ತಿಳಿಸಿದರು.

ಮಹಿಳಾ ಸಬಲೀಕರಣ ಹಾಗೂ ಏಳಿಗೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಕೆ.ಎಸ್. ಬಸವರಾಜ್ ಎಸಗುತ್ತಿರುವ ನೀಚ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು.

-ಗಿರೀಶ್ ಡಿ.ಆರ್. ರಾಜ್ಯಾಧ್ಯಕ್ಷರು, ಬಂಜಾರ ವಿದ್ಯಾರ್ಥಿ ಸಂಘ

ಮನವಿಯನ್ನು ಸ್ವೀಕರಿಸಿದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಮಾನಹಾನಿಗೆ ಒಳಗಾಗಿರುವ ಅಥವಾ ಅವರ ಕುಟುಂಬದವರಿಂದ ಸಮೀಪದ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ದಾಖಲಿಸುವಂತೆ ಸಲಹೆ ನೀಡಿದರು. ದೂರು ನೀಡಿದ ಬಳಿಕ ನೀವು ಅರ್ಜಿ ಕೊಟ್ಟರೂ ಕೊಡದಿದ್ದರೂ ನಾವು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಬಂಜಾರ ಸಮಾಜದ ಕುಬೇರನಾಯ್ಕ್, ಮಂಜಾನಾಯ್ಕ್, ಶಶಿಕಲಾ, ಲತಾ, ನಾಗಮ್ಮ, ಲಲಿತಾ, ಶಾಂತಮ್ಮ, ರತ್ನ ಸೇರಿದಂತೆ ಸಮಾಜದ ಇತರರು ಪಾಲ್ಗೊಂಡಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!