ಹರಿಹರ ನಗರದ ಬೀಡಿ ಕಾಲೋನಿ ನಿವಾಸಿಗಳಿಂದ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

ಸುದ್ದಿ360 ದಾವಣಗೆರೆ ಜ.5: ಕಳೆದ ಹತ್ತು ವರ್ಷಗಳಿಂದ ಬೀಡಿ ಕಾಲೋನಿಯಲ್ಲಿ ವಾಸಿಸುತ್ತಿದ್ದರೂ ನಮಗೆ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಅಗತ್ಯ ಮೂಲಭೂತ ಸೌಕರ್ಯಗಳೂ ಮರೀಚಿಕೆಯಾಗಿದ್ದು ಕೂಡಲೇ ನ್ಯಾಯ ಒದಗಿಸಿಕೊಡುವಂತೆ ಕೋರಿ ಹರಿಹರ ನಗರದ ಬೀಡಿ ಕಾಲೋನಿಯ ನಿವಾಸಿಗಳು ಜಿಲ್ಲಾಡಳಿತದ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.

ಬಹುಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಹರಿಹರದ ಬೀಡಿ ಕಾಲೋನಿಯಲ್ಲಿ ಕಳೆದ 10 ವರ್ಷಗಳಿಂದ ಇರುವ 103 ಮನೆಗಳ ನಿವಾಸಿಗಳ ಹೆಸರಿಗೆ ಇದುವರೆಗೂ ಖಾತೆ ನೋಂದಣಿಯಾಗಿಲ್ಲ ಇದನ್ನು ಖಂಡಿಸಿ ಹರಿಹರದ ಹರಪನಹಳ್ಳಿ ವೃತ್ತದ ಬಳಿ ಕಳೆದ 35 ದಿನಗಳಿಂದ ನಮ್ಮ ಪಕ್ಷದ ನೇತೃತ್ವದಲ್ಲಿ ನಿರಂತರ ಧರಣಿ ನಡೆಸಲಾಗುತ್ತಿದ್ದರೂ ನ್ಯಾಯ ದೊರೆತಿಲ್ಲ ಎಂದು ಹೇಳಿದರು.

ವಿದ್ಯುತ್ ಬಿಲ್, ಬೀಡಿ ಕಾರ್ಮಿಕರ ಸಂಘದ ಪೋಜಿಷನ್ ಲೆಟರ್ ಇದ್ದರೂ ಕಾರ್ಮಿಕ ಸಂಘದ ಅಧ್ಯಕ್ಷರು ಇಲ್ಲಿನ ನಿವಾಸಿಗಳ ಹೆಸರಿಗೆ ನೋಂದಣಿಯಾಗುವುದಿಲ್ಲ ಎಂದು ಬೆದರಿಕೆ ಹಾಕುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ಆದ್ದರಿಂದ, ಕೂಡಲೇ ಇವರ ಹೆಸರಿಗೆ ಹಕ್ಕುಪತ್ರ ನೀಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್, ಮುಖ್ತಿಯಾರ ಅಹಮದ್, ನಿವಾಸಿಗಳಾದ ಶೌಕತ್ ಅಲಿ, ಇಸ್ಮಾಯಿಲ್, ಹನೀಫ್ ಸಾಬ್, ರಜಾವುಲ್ಲಾ, ರಹತ್‌ಬಾನು, ಜಬೀನಾ ಬಾನು, ಮುಬಾರಕ್, ರೇಷ್ಮಬಾನು ಮತ್ತಿತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!