ಸುದ್ದಿ360 ದಾವಣಗೆರೆ, ಸೆ.13: ಹಿಂದಿ ಹೇರಿಕೆ ವಿರುದ್ಧ ಸೆ.14ರ ಬುಧವಾರ ಇಲ್ಲಿನ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿ ಎದುರು ಧರಣಿ ಹಮ್ಮಿಕೊಂಡಿರುವುದಾಗಿ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕ ಹಿಂದಿ ಹೇರಿಕೆ ವಿರುದ್ಧ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಕರವೇ ಯಾವುದೇ ಭಾಷೆಯನ್ನೂ ವಿರೋಧಿಸುವುದಿಲ್ಲ ಆದರೆ ಸರಕಾರ ಜನರ ತೆರಿಗೆ ಹಣ ಬಳಸಿ ಒಂದು ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು, ಕನ್ನಡ ನಾಡಿನಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರುವುದು ಎಲ್ಲೆಡೆ ಕಂಡು ಬರುತ್ತಿದೆ ಸರಕಾರದ ಈ ನಡೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಪ್ರತಿವರ್ಷ ಸೆ. 14ರಂದು ಕೇಂದ್ರ ಸರ್ಕಾರ ಹಿಂದಿ ದಿವಸ್ ಎಂದು ಆಚರಣೆ ಮಾಡುತ್ತಾ ಬಂದಿದೆ, ಹಿಂದಿ ರಾಷ್ಟ್ರಭಾಷೆ ಇಲ್ಲವಾದರೂ ಸಹ ಶಾಲೆಯ ಮಕ್ಕಳಿಗೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿ ಕೊಡುತ್ತಿರುವುದನ್ನು ಕರವೇ ಖಂಡಿಸುತ್ತದೆ. ಆದಕಾರಣ ಸೆ.14ರ ಬೆಳಿಗ್ಗೆ 11.30ಕ್ಕೆ ಡಿಡಿಪಿಐ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದೆಂದು ಸಂಘಟನೆಯ ಜಿಲ್ಲಾಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.