20 ಶ್ರೀಗಂಧದ ಮರಗಳನ್ನು‌ ರಾತ್ರೊರಾತ್ರಿ ಸದ್ದಿಲ್ಲದೆ ಕದ್ದೊಯ್ದ ಖದೀಮರು

ದಾವಣಗೆರೆ ಮಾ.೨೪: ಎಲ್ಲರೂ ಯುಗಾದಿ ಚಂದ್ರನ ದರ್ಶನ ಪಡೆದು ಗುರುಹಿರಿಯರ ಆಶೀರ್ವಾದ ಪಡೆಯುವಲ್ಲಿ ಮಗ್ನರಾದ ಸಂದರ್ಭದಲ್ಲಿ ಖದೀಮರು ೨೦ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಸಾಗಿಸಿದ್ದಾರೆ.

ಚನ್ನಗಿರಿ‌ ತಾಲೂಕಿನ ಕಾರಿಗನೂರು‌ ಗ್ರಾಮದ ರೈತ ಹಾಗೂ ಸಾವಯವ ಕೃಷಿಕ ರುದ್ರೇಶ್ ರವರ ಜಮೀನಿನಲ್ಲಿ ಬೆಳೆದಿದ್ದ‌ 15 ವರ್ಷ ವಯಸ್ಸಿನ 20 ಶ್ರೀಗಂದದ ಮರಗಳನ್ನು ಸೌಂಡ್ ಲೆಸ್ ಕಟಿಂಗ್ ಮಿಷಿನ್ ಬಳಸಿ ಕಳ್ಳತನ ಮಾಡಲಾಗಿದೆ.

ಕಳ್ಳತನ ಮಾಡಲು ಯುಗಾದಿ ಹಬ್ಬದ ಚಂದ್ರದರ್ಶನ ದಿನ ಫಿಕ್ಸ್ ಮಾಡಿ ಪ್ಲಾನ್ ಪ್ರಕಾರ 20 ಶ್ರೀಗಂಧದ ಮರಗಳನ್ನು ಕಡಿದು ಕೊಂಡೊಯ್ದಿದ್ದಾರೆ . ಈ ಕುರಿತಂತೆ ಬಸವಾಪಟ್ಟಣ ಪೋಲೀಸ್ ಠಾಣೆಯಲ್ಲಿ ದೂರು ದಾಖಾಗಿದೆ

Leave a Comment

error: Content is protected !!