ಸುದ್ದಿ360, ದಾವಣಗೆರೆ, ಜು.15: ಯಾರೂ ಧರ್ಮಕ್ಕೆ ಹೊರತಲ್ಲ ಮತ್ತು ಕಾನೂನು ಧರ್ಮ ಬಿಟ್ಟು ಬೇರೆ ಅಲ್ಲ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆದ ಅಖಿಲ ಕರ್ನಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಅನೇಕ ವೇಳೆ ಧರ್ಮ ಮತ್ತು ಕಾನೂನು ವಿಷಯಗಳ ಮಧ್ಯೆ ಸಂಘರ್ಷವಾಗುತ್ತಿರುತ್ತದೆ. ಯಾರು ಕಾನೂನಿಗೆ ಹೊರತಲ್ಲ ಎಂದು ಹೇಳುತ್ತಾರೆ. ಆದರೆ ಕಾನೂನು ಧರ್ಮ ಬಿಟ್ಟು ಬೇರೆ ಅಲ್ಲ ಎನ್ನುವುದು ನಮ್ಮ ವಾದ ಎಂದು ನುಡಿದರು.
ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಧರ್ಮದ ನುಡಿಗಳು ಪ್ರಪಂಚದ ಯಾವುದೇ ಮೂಲಗೆ ಹೋದರೂ ಅನ್ವಯಿಸುತ್ತದೆ. ಆದರೆ ಕಾನೂನು ಪ್ರಾದೇಶಿಕ ಭಗೋಳಿಕ ಪರಿಮಿತಿಯಲ್ಲಿ ಅನ್ವಯವಾಗುತ್ತದೆ. ಹಾಗಾಗಿ ಯಾರೂ ಧರ್ಮಕ್ಕೆ ಹೊರತಲ್ಲ ಎನ್ನುವುದು ಪ್ರಪಂಚಕ್ಕೇ ಅನ್ವಯಿಸುತ್ತದೆ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಅಭಿಪ್ರಾಯಪಟ್ಟರು.