ಗೊಲ್ಲರಹಳ್ಳಿಯಲ್ಲಿ ಸಂಭ್ರಮದ ಅಜ್ಜಿ ಹಬ್ಬ

ಸುದ್ದಿ360, ದಾವಣಗೆರೆ, ಜು.16: ಜಿಲ್ಲೆಯಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಬಳಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಅಜ್ಜಿ ಹಬ್ಬವನ್ನು ಆಚರಿಸಲಾಯಿತು.

ಎಂದಿನಂತೆ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಈ ಹಬ್ಬ ಆಚರಿಸಲಾಯಿತು. ಅಜ್ಜಿಹಬ್ಬ ಬಂತೆಂದರೆ, ರೈತರ ಮೊಗದಲ್ಲಿ ಒಂದು ರೀತಿಯ ಮಂದಹಾಸ. ಈ ಹಬ್ಬ ಬರುವುದರೊಳಗೆ ರೈತರು ತಮ್ಮ ಬಿತ್ತನೆ ಕಾರ್ಯಗಳನ್ನು ಮುಗಿಸಿ, ಬೆಳೆಗಳು ಸಮೃದ್ಧವಾಗಿ ಬರಲೆಂದು ದೇವಿಯನ್ನು ಆರಾಧಿಸುತ್ತಾರೆ. ಮನೆಗಳಲ್ಲಿನ ದನ-ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಾಗೂ ಸಣ್ಣ ಮಕ್ಕಳ ಮೈಮೇಲೆ ಗುಳ್ಳೆಗಳು ಏಳದಂತೆ, ಜ್ವರ ಬರುವುದು ಅಥವಾ ಅಮ್ಮಾ ಬಂದಿದ್ದರೆ ಅವುಗಳನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುವ ಹಬ್ಬವನ್ನು   ಗೊಲ್ಲರಹಳ್ಳಿ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಗ್ರಾಮಸ್ಥರಿಂದ ಗ್ರಾಮದ ಹೊರವಲಯದ ಅಮ್ಮನ ಗದ್ದಿಗೆಯ ಬೇವಿನ ಮರದಡಿ ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಲಾಯಿತು. ನಂತರ ಮನೆಗೆ ತೆರಳಿ ಕುಟುಂಬದವರು ಬಂಧು ಬಳಗದೊಂದಿಗೆ ಹೋಳಿಗೆ ಭೋಜನ ಸವಿದರು.

admin

admin

Leave a Reply

Your email address will not be published. Required fields are marked *

error: Content is protected !!