ಬಿಜೆಪಿಯವರಿಗೆ ಅಭಿವೃದ್ಧಿಯ ಇಚ್ಛಾಶಕ್ತಿ ಇಲ್ಲ – ಎಸ್ ಎಸ್ ಮಲ್ಲಿಕಾರ್ಜುನ್ ಆರೋಪ

ಸುದ್ದಿ360, ದಾವಣಗೆರೆ, ಜು.18:  ಯಾವುದೇ ಕಾಮಗಾರಿಗಳು ಪರಿಪೂರ್ಣಗೊಳ್ಳಲು ಕ್ರಮಬದ್ಧವಾದ ಯೋಜನೆ ಇರಬೇಕು. ಆದರೆ ಬಿಜೆಪಿ ಜನಪ್ರತಿನಿಗಳಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಚ್ಛಾಶಕ್ತಿ ಇಲ್ಲ ಎಂದು ನಗರದಲ್ಲಿನ ಕಾಮಗಾರಿಗಳ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ್  ಆರೋಪಿಸಿದರು.

ನಗರದ ಹೊರವಲಯದ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಸೋಮವಾರ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಕುಂದವಾಡ ಕೆರೆ ಏರಿ ಅಭಿವೃದ್ಧಿ ಕುಂಟುತ್ತಾ ಸಾಗಿದ್ದು, ನಗರದೆಲ್ಲೆಡೆ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಗಾಜಿನ ಮನೆ ನಿರ್ವಹಣೆ ಆಗುತ್ತಿಲ್ಲ. ಗಾಜಿನ ಮನೆ ಆವರಣದಲ್ಲಿ ವಿದೇಶಿ ಗಿಡಗಳನ್ನು ಹಾಕಿ ಬೆಳೆಸಿದ್ದೆವು. ಸರಿಯಾದ ನಿರ್ವಹಣೆ ಇಲ್ಲದೆ ಗಾಜಿನ ಮನೆ ಕಳೆಗುಂದಿ ಹೋಗಿದೆ. ಬಿಜೆಪಿಯವರು ಜಾಲಿ ಗಿಡ ಬೆಳೆಸುತ್ತೇವೆ ಎಂದರೆ ನಾನೇನು ಮಾಡಲಿ? ಎಂದು ಪ್ರಶ್ನಿಸಿದರು.

Leave a Comment

error: Content is protected !!