ಶೌಚಾಲಯವಿದ್ದರೂ ಬಳಕೆಗೆ ಲಭ್ಯವಿಲ್ಲ
ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡು, ಸಾರ್ವಜನಿಕ ಉಪಯೋಗಕ್ಕೆ ನೀಡಲಾಗಿದೆ. ಇದಾಗಿ ತಿಂಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಸಾರ್ವಜನಿಕ ಆಕ್ರೋಶಕ್ಕೆ ಒಳಗಾಗಿರುವ ಯೋಜನೆಗಳಲ್ಲಿ ಯೋಜನಯೇ ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್ ಕೂಡ ಸೇರಿದೆ ಎಂದು ಕೆ.ಎಲ್ ಹರೀಶ್ ಬಸಾಪುರ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಪ್ರವಾಸಕ್ಕೆ ಬಂದಾಗ ನಾಲ್ಕೈದು ಯೋಜನೆಗಳನ್ನು ಎಲ್ಲೋ ಒಂದು ಕಡೆ ನಿಂತು ಉದ್ಘಾಟನೆ ಮಾಡುವ ಪರಿಪಾಠ ಪ್ರಾರಂಭಿಸಿದ್ದು ಇದರಿಂದ ತಾವು ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳು ಪೂರ್ಣಗೊಂಡಿವೆಯೇ? ಉತ್ತಮ ಗುಣಮಟ್ಟದಿಂದ ಕೂಡಿವೆಯೇ? ಎಂಬ ಅರಿವೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರುವುದಿಲ್ಲ ಎಂದು ಆರೋಪಿಸಿದ್ದಾರೆ.
ಬೀಗ ತೆರೆಯಾದ ಶೌಚಾಲಯ
ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡು, ಸಾರ್ವಜನಿಕ ಉಪಯೋಗಕ್ಕೆ ನೀಡಲಾಗಿದೆ. ಇದಾಗಿ ತಿಂಗಳುಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ. ದಿನಕ್ಕೆ ಸಾವಿರಾರು ಪ್ರಯಾಣಿಕರು ಈ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದು ಸುತ್ತಮುತ್ತ ವಾಣಿಜ್ಯ ಮಳಿಗೆಗಳು, ಶಾಲಾ-ಕಾಲೇಜುಗಳು ಇರುವುದರಿಂದ ಪ್ರಯಾಣಿಕರು ಸೇರಿದಂತೆ ಈ ಭಾಗದಲ್ಲಿ ವ್ಯವಹರಿಸುವ ಆಸುಪಾಸಿನ ಜನರು, ವಿದ್ಯಾರ್ಥಿಗಳು ಮೂತ್ರ ವಿಸರ್ಜಿಸಲು ಸ್ಥಳಾವಕಾಶವಿಲ್ಲದೆ ಪರದಾಡುತ್ತಾರೆ. ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಾಲಯದ ಬಾಗಿಲು ಮಾತ್ರ ಭದ್ರವಾಗಿ ಮುಚ್ಚಿ ಬೀಗ ಹಾಕಲಾಗಿದೆ. ಪಾಪ ಅಧಿಕಾರಿಗಳಿಗೆ, ಸಚಿವರುಗಳಿಗೆ ಇಂತಹ ಸಾರ್ವಜನಿಕರ ಕಷ್ಟ ಎಲ್ಲಿ ಅರ್ಥವಾಗಬೇಕು? ಪ್ರಯಾಣಿಕರು ಇಡಿ ಶಾಪ ಹಾಕುತ್ತಿರುವುದು ಕೂಡ ಇವರ ಗಮನಕ್ಕೆ ಬರುವುದಿಲ್ಲ ಎಂದು ಕುಟುಕಿದ್ದಾರೆ.
ಕೇವಲ ಪ್ರಚಾರಕ್ಕಾಗಿ ಉದ್ಘಾಟನೆ ಮಾಡುವ ಬದಲು ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವಂತೆ ಕೆ.ಎಲ್. ಹರೀಶ್ ಬಸಾಪುರ ಆಗ್ರಹಿಸಿದ್ದಾರೆ.