ನೈಋತ್ಯ ರೈಲ್ವೆ – ಯಾವ ರೈಲುಗಳ ಸೇವೆ ರದ್ದಾಗಿದೆ ಇಲ್ಲಿದೆ ಮಾಹಿತಿ

ಸುದ್ದಿ360, ಜು.25: ದೌಂಡ್ – ಕುರ್ದುವಾಡಿ  ಭಾಗದ ಭಿಗ್ವಾನ್‌ ಮತ್ತು ವಾಷಿಂಬೆ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾರ್ಯಕ್ಕೆ ಸಂಬಂಧಿಸಿದಂತೆ ನಾನ್-ಇಂಟರ್‌ಲಾಕಿಂಗ್ ಕಾಮಗಾರಿಯ ನಿಮಿತ್ತ ಕೇಂದ್ರೀಯ ರೈಲ್ವೆ ಸೂಚನೆಯಂತೆ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗುತ್ತದೆ.

  • ರೈಲು ಸಂಖ್ಯೆ 22601 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್  – ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 27.07.2022 ಮತ್ತು 03.08.2022 ರಂದು ರದ್ದುಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 22602 ಸಾಯಿನಗರ ಶಿರಡಿ – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 29.07.2022 ಮತ್ತು 05.08.2022 ರಂದು ರದ್ದುಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 16502 ಯಶವಂತಪುರ – ಅಹ್ಮದಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 31.07.2022 ಮತ್ತು 07.08.2022 ರಂದು ರದ್ದುಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 16501 ಅಹ್ಮದಾಬಾದ್ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ದಿನಾಂಕ 02.08.2022 ಮತ್ತು 09.08.2022 ರಂದು ರದ್ದುಗೊಳಿಸಲಾಗುತ್ತದೆ
admin

admin

Leave a Reply

Your email address will not be published. Required fields are marked *

error: Content is protected !!