ಇ-ಕೆವೈಸಿಗೆ 31 ಕಡೆಯ ದಿನ

ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ.

ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.

ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತರ ಆಧಾರ್ ಸಂಖ್ಯೆ ಹಾಗೂ ಆಧಾರ್‌ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ ನಮೂದಿಸಿದರೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ದಾಖಲಿಸಿದ ಬಳಿಕ `ಇ-ಕೆವೈಸಿ ಈಸ್ ಸಕ್ಸಸ್‌ಫುಲಿ ಸಬ್ಮಿಟೆಡ್’ ಎಂದು ತೋರಿಸುತ್ತದೆ.

ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡದೇ ಇರುವ ಹಾಗೂ ಓಟಿಪಿ ಸ್ವೀಕರಿಸದೇ ಇರುವ ಫಲಾನುಭವಿಗಳು ಸಮೀಪದ ನಾಗರಿಕ ಸೇವಾ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ಆಧಾರದಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

admin

admin

Leave a Reply

Your email address will not be published. Required fields are marked *

error: Content is protected !!