ರಂಗಭೂಮಿ ಡಿಪ್ಲೊಮಾಗೆ ಅರ್ಜಿ ಆಹ್ವಾನ

ಸುದ್ದಿ360 ದಾವಣಗೆರೆ ಜು.25: ಮೈಸೂರಿನ ನಟನ ರಂಗಶಾಲೆಯು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ‘ರಂಗಭೂಮಿ ಡಿಪ್ಲೊಮಾ’ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಆ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನ ರಾಮಕೃಷ್ಣ ನಗರದ ಕೆ ಬ್ಲಾಕ್‌ನಲ್ಲಿರುವ ನಟನ ರಂಗಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ನಡೆಯಲಿದೆ. ಹಿರಿಯ ರಂಗ ಹಾಗೂ ಚಿತ್ರ ಕಲಾವಿದ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆ, ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಡಿಪ್ಲೊಮಾ ಪ್ರವೇಶಕ್ಕೆ 16ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಬಹುದಾಗಿದ್ದು, ರಂಗಶಾಲೆ ಕಚೇರಿಯಿಂದ ಇಲ್ಲವೇ ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.natanamysuru.org ನಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಶುಲ್ಕದೊಂದಿಗೆ ನೇರವಾಗಿ ಅಥವಾ ಅಂಚೆ ಮೂಲಕ ಕಚೇರಿಗೆ ತಲುಪಿಸಬೇಕು. ಪ್ರವೇಶ ಶುಲ್ಕ ಹಾಗೂ ಇತರ ಮಾಹಿತಿಗೆ ಮೊ:  72595 37777, 94804 68237, 98455 95505 ಸಂಪರ್ಕಿಸಬಹುದು.

admin

admin

Leave a Reply

Your email address will not be published. Required fields are marked *

error: Content is protected !!