ಸುದ್ದಿ360, ದಾವಣಗೆರೆ ಜು.26: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಗಿಲ್ ವಿಜಯ ದಿವಸ್‍ನ್ನು ದಾವಣಗೆರೆ ನಗರದ ಹರಳೆಣ್ಣೆ ಕೊಟ್ರಬಸಪ್ಪ (ರಾಂ ಅಂಡ್ ಕೋ) ವೃತ್ತದಲ್ಲಿ ಮಂಗಳವಾರ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ಇಡೀ ದೇಶ ಇಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ಇಂದು ವಿಶೇಷವಾಗಿ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ದೇಶ ಸೇವೆ ಮಾಡುವ ಸೈನಿಕರ ಬಗ್ಗೆ ತಾತ್ಸಾರ ಮನೋಭಾವದಿಂದ ಕಾಣುತ್ತಿದ್ದು, ಕೂಲಿ ಆಳುಗಳಂತೆ ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ತಮ್ಮ ಕುಟುಂಬ, ಬಂಧು-ಬಳಗವನ್ನು ತೊರೆದು ದೇಶ ಕಾಪಾಡುವ ಸೈನಿಕರನ್ನು ಗೌರವದಿಂದ ಕಾಣಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೆ.ಜಿ.ಶಿವಕುಮಾರ್, ಮಾಗಾನಹಳ್ಳಿ ಪರಶುರಾಮ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಸದಸ್ಯ ಎ.ನಾಗರಾಜ್ ಕಾಂಗ್ರೆಸ್ ಯುವ ಘಟಕದ ಮೈನುದ್ದೀನ್, ದ್ರಾಕ್ಷಾಯಣಮ್ಮ, ಶ್ರೀಮತಿ ಗೀತಾ ಪ್ರಶಾಂತ್, ಯುವ ಕಾಂಗ್ರೆಸ್‍ನ ಸಾಗರ್ ಎಲ್ ಎಂ ಹೆಚ್., ಮಹ್ಮದ್ ಸಮೀವುಲ್ಲಾ, ಮುಖಂಡರುಗಳಾದ ಶ್ರೀಕಾಂತ್ ಬಗರೆ, ಅಜಿತ್ ಆಲೂರು, ಯುವರಾಜ್, ರಾಜು ಭಂಡಾರಿ, ಪ್ರವೀಣ್ ಫಾರ್ಮ, ಬ್ಯಾಂಕ್ ಹನುಮಂತಪ್ಪ, ಸತೀಶ್ ಶೆಟ್ಟಿ, ಮಂಜುನಾಥಸ್ವಾಮಿ ಕತ್ತಲಗೇರಿ, ಮೊಟ್ಟೆ ದಾದಾಪೀರ್, ಪರಶುರಾಮ್ ಮತ್ತಿತರರಿದ್ದರು.