ದಾವಣಗೆರೆಯಲ್ಲಿ ‘ದ ಜ್ಯುವೆಲರಿ ಷೋ’ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟ

ಸುದ್ದಿ360 ದಾವಣಗೆರೆ, ಜು.28: ದೇಶದ 15 ಅಗ್ರಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ “ದ ಜ್ಯುವೆಲರಿ ಷೋ” ಪ್ರದರ್ಶನ ಮತ್ತು ಮಾರಟ ಇದೇ ಜುಲೈ 29, 30 ಮತ್ತು 31ರಂದು ದಾವಣಗೆರೆಯ ‘ಎಸ್ ಎಸ್ ಕನ್ವೆಂಷನ್ ಸೆಂಟರ್’ ನಲ್ಲಿ ಆಯೋಜಿಸಲಾಗಿದೆ.

ಅಮೋಘ ಭಾರತೀಯ ಒಡವೆಗಳ ಉತ್ಸವವನ್ನು ಜನಪ್ರಿಯ ನಟಿ ಧನ್ಯ ರಾಮ್‌ ಕುಮಾರ್ ಅವರು ಆಭರಣ ಮೇಳವನ್ನು ಜುಲೈ 29 ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಿದ್ದಾರೆ.

ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ. ಅಲ್ಲದೆ ಮುಂಬರುವ ಮದುವೆ ಸಮಾರಂಭ ಹಾಗೂ ವರಮಹಾಲಕ್ಷ್ಮೀ ಹಬ್ಬದ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದ್ದು, ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳನ್ನು ಈ ಮೇಳದಲ್ಲಿ ದೊರೆಯಲಿವೆ ಎಂದು ಮೇಳದ  ಆಯೋಜಕರಾದ  ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್‌ ತಿಳಿಸಿದ್ದಾರೆ.

Leave a Comment

error: Content is protected !!