ಶಿವಮೊಗ್ಗ ನಗರದಲ್ಲಿ ಮತ್ತೊಂದು ಭೀಕರ ಕೊಲೆ

ಸುದ್ದಿ360 ಶಿವಮೊಗ್ಗ, ಆ.03: ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆಗಿ19 ದಿನಗಳು ಕಳೆದಿದ್ದು, ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ಶಿವಮೊಗ್ಗ ಜನರನ್ನ‌ಬೆಚ್ಚಿ ಬೀಳಿಸಿದೆ.

ನಗರದ ಸಾಗರ ರಸ್ತೆಯ ಬಾರೊಂದರ ಬಳಿ ಓರ್ವ ಯುವಕನನ್ನು ಬಿಯರ್ ಬಾಟಲಿಯಿಂದ ಇರಿದು, ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಸುದ್ದಿ ವರದಿಯಾಗಿದೆ.

ಕೊಲೆಯಾದ ಯುವಕನನ್ನ ಪುಚ್ಚಿ ಕಿರಣ್ ಎಂದು ಗುರುತಿಸಲಾಗಿದ್ದು, ಹೊಸಮನೆ ಏರಿಯಾದ ಹುಡುಗನಾಗಿರುವ ಈತ ನಿನ್ನೆ ರಾತ್ರಿ ಕುಡಿಯಲು ತೆರಳಿದ್ದನು. ಕಿರಣ್ ಜೊತೆ ಇಬ್ವರು ಸ್ನೇಹಿತರು ತೆರಳಿದ್ದು ಕುಡಿತದ ನಶೆಯಲ್ಲಿ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಕಿರಣ್ ಮತ್ತು ಇಬ್ಬರು ಸ್ನೇಹಿತರ ನಡುವೆ ಜಗಳ ಉಂಟಾಗಿದ್ದು ಸ್ನೇಹಿತರು ಬಿಯರ್ ಬಾಟಲಿಯಿಂದ ಇರಿದು ಮತ್ತು ಕಲ್ಲಿಗೆ ಜಜ್ಜಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿದವನನ್ನ ಪ್ರಜ್ವಲ್ ಹಾಗೂ ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಿರಣ್ ಸಣ್ಣ ಪುಟ್ಟ ಹೊಡೆದಾಟ ಮತ್ತು ಇತರೆ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.

ಸಾಗರ ರಸ್ತೆಯ ಬಾರ್ ಬಳಿ ಈ ಘಟನೆ ನಡೆದಿದ್ದು, ವಿನೋಬ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ವಿನೋಬನಗರ ಪಿಐ ರವಿಕುಮಾರ್ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಕಿರಣ್ ಜೊತೆಯಲ್ಲಿ ಹೋಗಿದ್ದ ಇಬ್ಬರ ವಿರುದ್ದ ದೂರು ದಾಖಲಾಗಿದ್ದು ತನಿಖೆ ಮುದುವರೆದಿದೆ.

Leave a Comment

error: Content is protected !!