ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮಾರಕಾಸ್ತ್ರ ಬೀಸಿ ಕೊಲೆ

ಸುದ್ದಿ360 ಬೆಳಗಾವಿ, ಆ.26: ಬೈಕ್ ಮೇಲೆ ಹೋಗುತ್ತಿದ್ದವನ ಕತ್ತು ಕತ್ತರಿಸಿ ಕೊಲೆ ಮಾಡಿರುವ ಭೀಕರ ಘಟನೆ ಶುಕ್ರವಾರ ವರದಿಯಾಗಿದೆ.

ಸವದತ್ತಿ ತಾಲ್ಲೂಕಿನ ಮುನ್ನವಳ್ಳಿ ಗ್ರಾಮದ ಗದಗಯ್ಯ ಹಿರೇಮಠ (40) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಗದಗಯ್ಯ ತಮ್ಮ ಬೈಕ್ ಮೇಲೆ ಹಲಗಾ ಮಾರ್ಗವಾಗಿ ಹೊರಟಿದ್ದ ವೇಳೆ ಹಿಂಬದಿಯಿಂದ ಬೈಕ್ ಮೇಲೆ ಬಂದ  ಆರೋಪಿಗಳು ಈ ದುಶ್ಕೃತ್ಯ ಎಸಗಿದ್ದಾರೆ.

ಬೈಕ್ ಚಲನೆಯಲ್ಲಿದ್ದಾಗಲೇ ಗದಗಯ್ಯನ ಕುತ್ತಿಗೆಯ ಭಾಗಕ್ಕೆ ಮಾರಕಾಸ್ತ್ರ ಬೀಸಿದ್ದು, ಕುತ್ತಿಗೆಯ ಬಹುಪಾಲು ತುಂಡರಿಸಿದೆ. ಇದರಿಂದ ಬೈಕ್ ಸಮೇತ ಬಿದ್ದ ಗದಗಯ್ಯ ಸ್ಥಳದಲ್ಲೇ ಅಸುನೀಗಿದ್ದಾರೆ.

ಹಿರೇಬಾಗೇವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಮತ್ತು  ಕೊಲೆಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

Leave a Comment

error: Content is protected !!