ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ: ಫೋಕ್ಸೊ ಕೇಸ್ ದಾಖಲು – ಷಡ್ಯಂತ್ರ?

ಸುದ್ದಿ360 ಚಿತ್ರದುರ್ಗ, ಆ.27: ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಮುರುಘಾ ಶರಣರು ಸೇರಿದಂತೆ ಐದು ಜನರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿದ್ದು, ಮೈಸೂರು ಒಡನಾಡಿ ಸಂಸ್ಥೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಮಠವೇ ನಡೆಸುತ್ತಿರುವ ಪ್ರೌಢಶಾಲೆಯ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದ್ದು, ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕಿಯರು ಬೆಂಗಳೂರಿಗೆ ಬಳಿಕ ಮೈಸೂರಿನ ಒಡನಾಡಿ ಸಂಸ್ಥೆಯ ಸಂಪರ್ಕಕ್ಕೆ ಬಂದಿದ್ದರು. ಒಡನಾಡಿ ಸಂಸ್ಥೆಯು ಮಕ್ಕಳಿಗೆ ರಕ್ಷಣೆ ನೀಡಿ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಪೋಕ್ಸೋ ಕಾಯಿದೆಯನ್ವಯ ತಕ್ಷಣವೇ ದೂರು ದಾಖಲಿಸುವ ನಿಯಮವಿದೆ. ಅದರಂತೆ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ.

ಮಠದ ವಿರೋಧಿಗಳಿಂದ ಷಡ್ಯಂತ್ರ ?

ಇದೀಗ ಮಠದ ಭಕ್ತರು, ಚಿತ್ರದುರ್ಗದ ಮಠದ ಬಳಿ ಜಮಾವಣೆಗೊಂಡು, ಇದು ಪೂರ್ವಯೋಜಿತ ಕೆಲಸವಾಗಿದೆ. ತಪ್ಪಿತಸ್ಥರು ತಮ್ಮ ತಪ್ಪನ್ನು ಅರಿತು ಕೇಸ್ ವಾಪಸ್ ಪಡೆಯಲಿ. ಮಠದ ವಿರೋಧಿ ಶಕ್ತಿ ಇಂತಹ ಷಡ್ಯಂತ್ರಕ್ಕೆ ಕೈಹಾಕಿದೆ. ಇದರಿಂದ ಶರಣರ ಮನಸಿಗೆ ಘಾಸಿಯಾಗಿದೆ ಎಂದಿದ್ದಾರೆ. ಮುಂದೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಕೀಲ ವಿಶ್ವನಾಥ್  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮುರುಘಾ ಶ್ರೀಗಳು, ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯರ ಅವರುಗಳು ಕ್ರಮವಾಗಿ ಒಂದರಿಂದ ಐದನೇ ಆರೋಪಿಯಾಗಿದ್ದಾರೆ. ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

admin

admin

Leave a Reply

Your email address will not be published. Required fields are marked *

error: Content is protected !!