ದಾವಣಗೆರೆ: ಗಾಂಜಾ ಮಾರಾಟ ಮಾಡುತ್ತಿದ್ದಾತನ ಬಂಧನ

ಸುದ್ದಿ360 ದಾವಣಗೆರೆ, ಸೆ.11: ಜಿಲ್ಲೆಯ ಹರಿಹರ ನಗರದ ಮನೆಯೊಂದರಲ್ಲಿ ಅಕ್ರಮ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಪೊಲೀಸರು ಆತನಿಂದ 14 ಸಾವಿರ ಮೌಲ್ಯದ 280 ಗ್ರಾಂ ಗಾಂಜಾ ಸೊಪ್ಪು, ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಹರಿಹರ ನಗರದ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡಲಾಗಿತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಸಿಪಿಐ ಸತೀಶ್ ಕುಮಾರ್ , ಪಿಎಸ್ ಐ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿಯವರಾದ ಕರಿಬಸಪ್ಪ, ಸೈಯ್ಯದ್ ಗಫಾರ್, ತಿಮ್ಮೇಶ್, ಹನುಮಂತಪ್ಪ ಕವಾಡಿ, ನಾಗರಾಜ ಸಿ.ಎಂ., ನೂರುಲ್ಲಾ ಕಲಾರಿ, ಸಿದ್ದರಾಜು ಎಸ್.ಜಿ. ಇವರನ್ನೊಳಗೊಂಡ ತಂಡ ದಾಳಿ ಮಾಡಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!