ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.
ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು ಮಕ್ಕಳಿಗೆ ಎಸ್ಸೆಸ್ಸೆಮ್ ಕಪ್ ಬಹುಮಾನ ವಿತರಣೆಯನ್ನು ಮಾಡಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದು ಈ ಪಂದ್ಯಾವಳಿಯು ಸ್ವಿಸ್ ಮಾದರಿಯಲ್ಲಿ 6-7 ಸುತ್ತುಗಳು ನಡೆಯಲಿದ್ದು ಇದರಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದ ಬಾಲಕ ಬಾಲಕಿಯರಿಗೆ ‘ಎಸ್ ಎಸ್ ಎಂ@55 ಚದುರಂಗ ಕಪ್’ ಅನ್ನು ವಿತರಿಸಲಾಗುವುದು. ನಂತರದ ಹತ್ತು ಸ್ಥಾನಗಳಿಗೆ ಹಾಗೂ 07 09 11 13 15 ವರ್ಷದ ಒಳಗಿನ ಮಕ್ಕಳಿಗೆ ಬಾಲಕ ಬಾಲಕಿಯರಿಗೆ ತಲಾ 5-5 ವಿಶೇಷ ಬಹುಮಾನ ಹಾಗೂ ಭಾಗವಹಿಸಿದ ಹತ್ತಿರದ ಜಿಲ್ಲೆಯ ಮಕ್ಕಳಿಗೆ ಬೆಸ್ಟ್ ಚಿತ್ರದುರ್ಗ, ಬೆಸ್ಟ್ ಶಿವಮೊಗ್ಗ, ಬೆಸ್ಟ್ ಹೊಸಪೇಟೆ, ಬೆಸ್ಟ್ ದಾವಣಗೆರೆ, ಎಂದು ಒಟ್ಟು 75 ವಿಶೇಷ ಟ್ರೋಫಿಯನ್ನು ವಿತರಿಸಲಾಗುವುದು ಎಂದು ಸಂಘದ ಕಾರ್ಯದರ್ಶಿಗಳಾದ ಯುವರಾಜ್ ತಿಳಿಸಿದರು.
ಈ ಪಂದ್ಯಾವಳಿಗೆ ಹೆಸರನ್ನು ನೋಂದಾಯಿಸಲು ದಿನಾಂಕ 17-09-2022 ಕಡೆಯ ದಿನಾಂಕವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗೆ ಸಂಘದ ಸಹ ಕಾರ್ಯದರ್ಶಿಗಳಾದ ಎಸ್ ಮಂಜುಳಾ ಅವರನ್ನು 9945613469 7259310197 ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.