ಅ.28ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿ360 ದಾವಣಗೆರೆ ಅ.27: ಸ್ಪೈರ್‌ ಕ್ಲಿನಿಕ್, ಆಲ್‌ವೇಸ್ ಬೆಸ್ಟ್ ಕೇರ್ ಹಾಸ್ಪಿಟಲ್, ಸಿಟಿ ಸೆಂಟ್ರಲ್ ಆಸ್ಪತ್ರೆ ಇವರ ಸಂಯುಕ್ತಶ್ರಾಯದಲ್ಲಿ ಅ.28ರಂದು ಹದಡಿ ರಸ್ತೆಯಲ್ಲಿರುವ ಆಲ್‌ವೇಸ್ ಬೆಸ್ಟ್ ಕೇರ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಿದ್ದು, ಉಸಿರಾಟದ ತೊಂದರೆ, ಹೃದಯ, ಮೂಳೆ, ಕೀಲು ರೋಗದ ತಪಾಸಣೆ ಮಾಡಲಾಗುವುದು ಹಾಗೂ ಉಚಿತವಾಗಿ ಔಷಧಿ, ಇಸಿಜಿ, ಇಕೋ ಮತ್ತು ಮೂಳೆ ಸಾಂಧ್ರತೆಯ ಪರೀಕ್ಷೆ ಮಾಡಲಾಗುವುದು. ಸಾರ್ವಜನಿಕರು ಹೆಸರು ನೋಂದಾಯಿಸಲು ಸಂಜೀವ ರೆಡ್ಡಿ: 9900906390, 6361598523 ಗೆ ಸಂಪರ್ಕಿಸಬಹುದಾಗಿದೆ.

Leave a Comment

error: Content is protected !!