ಸುದ್ದಿ360 ಮುಂಬಯಿ: ಬಾಲಿವುಡ್ ಖ್ಯಾತ ನಟಿ ಬಿಪಾಶ ಬಸು ಶನಿವಾರ ಮುಂಬೈಯ ಖಾಸಗಿ ಆಸ್ಪತ್ರೆ ಒಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಮಗುವಿಗೆ “ದೇವಿ ಬಸು ಸಿಂಗ್ ಗ್ರೋವರ್” ಎಂದು ಹೆಸರಿಡಲಾಗಿದೆ.
ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ಬಿಪಾಶ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ದಂಪತಿ ಶನಿವಾರ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ಈ ಖುಷಿ ಸಮಾಚಾರವನ್ನು ಸ್ಟಾರ್ ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಫಾಲೋವರ್ಗಳು ಹಾಗೂ ಸ್ನೇಹಿತರು ಹಾರೈಕೆಯ ಸುರಿಮಳೆ ಗೈದಿದ್ದಾರೆ. ”ನಮ್ಮಿಬ್ಬರ ಬಾಳಿನಲ್ಲಿ ಮುದ್ದಾದ ಮಗುವಿನ ಆಗಮನ ವಾಗಿದೆ. ಅವಳು ನಮ್ಮ ಪಾಲಿನ ದೇವತೆ. ಹೀಗಾಗಿ ಮಗುವಿಗೆ ‘ದೇವಿ ಬಸು ಸಿಂಗ್ ಗ್ರೋವರ್”ಎಂಬ ಹೆಸರಿಡಲಾಗಿದೆ ಎಂದು ದಂಪತಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಿಪಾಶ ಬಸು ಪ್ರೆಗ್ನೆನ್ಸಿ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆ ಫೋಟೋ ಕೂಡ ವೈರಲ್ ಆಗಿತ್ತು. ಇದೀಗ ಬಿಪಾಶ ತಮಗೆ ಜನಿಸಿರುವ ಹೆಣ್ಣು ಮಗುವಿನ ಕಾಲುಗಳ ಫೋಟೋವನ್ನು ಮಗುವಿನ ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ.