ದೇವನಗರಿಯಲ್ಲಿ ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ

ಸುದ್ದಿ360 ದಾವಣಗೆರೆ ಡಿ.25:  ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ವಿದ್ಯಾನಗರದ ಶ್ರೀ ಈಶ್ವರ ದೇವಾಲಯದ ಬಳಿ ಅದ್ದೂರಿಯಾಗಿ ಕನ್ನಡ ರಥವನ್ನು ಬರಮಾಡಿಕೊಳ್ಳಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ,  ಪಾಂಡೋಮಟ್ಟಿ ಶ್ರೀಗಳು, ಯರಗುಂಟಿ ಶ್ರೀಗಳು, ಹರಿಹರ ಮಾಜಿ ಶಾಸಕ ಬಿ.ಪಿ ಹರೀಶ್, ಸಾಹಿತಿ ಎನ್ ಟಿ. ಯರ್ರಿಸ್ವಾಮಿ,  ಕಸಾಪ ಕೋಶಾಧಿಕಾರಿ ರಾಘವೇಂದ್ರ ನಾಯರಿ, ರೇವಣಸಿದ್ದಪ್ಪ ಅಂಗಡಿ, ಪತ್ರಕರ್ತರಾದ ಜಿಗಳಿ ಪ್ರಕಾಶ್, ಫಕೃದ್ದೀನ್, ಅಜಿತ್ ಸಾವಂತ್, ಸುಭಾಷಿತ ಪತ್ರಿಕೆ ಸಂಪಾದಕರಾದ ಡಾ. ಕೆ. ಜೈಮುನಿ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಾ.ಡಿ.ಪ್ರಾನ್ಸಿಸ್ ಕ್ಸೇವಿಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತಿತರರು ಭಾಗವಹಿಸಿದ್ದರು.

ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಜಾನಪದ ಮೇಳದೊಂದಿಗೆ. ಅದ್ದೂರಿ ಮೆರವಣಿಗೆ ಮಾಡಲಾಯಿತು.

Leave a Comment

error: Content is protected !!