ಸುದ್ದಿ360 ದಾವಣಗೆರೆ, ಡಿ.30: ಮೀಸಲಾತಿಯಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿರುವ ಬಜೆಪಿಯ ಡಬ್ಬಲ್ ಇಂಜಿನ್ ಸರ್ಕಾರ ಗೊಂದಲದಲ್ಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತವೊಲಿಕೆಯ ರಾಜಕಾರಣ ಮಾಡುತ್ತಿದೆ ಎಂದು ಮೀಸಲಾತಿ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಅವರು ದಾವಣಗೆರೆಯಲ್ಲಿ ನಡೆಯುತ್ತಿರುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಿಸರ್ವೇಷನ್ 50 ಪರ್ಸೆಂಟ್ಗಿಂತ ಹೆಚ್ಚಾಗಬಾರದು ಎಂದು 1992ರಲ್ಲಿ ಸುಪ್ರೀಂಕೋರ್ಟ್ ಬೆಂಚ್ ಬಹಳ ಸ್ಪಷ್ಟವಾಗಿ ಹೇಳಿದೆ. ಆದರೆ ಈ ಮೊದಲು ಕೇಂದ್ರ ಸರ್ಕಾರದ ರಿಸರ್ವೇಶನ್ ಪರ್ಸೆಂಟ್ 49.5 ಪರ್ಸೆಂಟ್ ಇದೆ. ಈಗ 103ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಇಡಬ್ಲ್ಯೂ ಎಸ್ ಗೆ 10 ಪರ್ಸೆಂಟ್ ಕೊಟ್ಟಿದ್ದಾರೆ. ಮತ್ತೆ ನಾಗಮೋಹನದಾಸ್ ವರದಿ ಪ್ರಕಾರ ಎಸ್ಸಿ ಎಸ್ಟಿಗಳಿಗೆ 6 ಪರ್ಸೆಂಟ್ ಕೊಡ್ತೀವಿ ಅಂತ ಸುಗ್ರೀವಾಜ್ಞೆ ಮಾಡಿದಾರೆ. ಈಗ 50 ಪರ್ಸೆಂಟ್ಗಿಂತ 15.5 ಪರ್ಸೆಂಟ್ ಜಾಸ್ತಿ ಆಗಿದೆ. ಮತ್ತೆ ಅದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕೊಡ್ತಾರೆ ಅನ್ನೋದನ್ನೂ ಇನ್ನೂ ಹೇಳಿಲ್ಲ. ಹಾಗಾಗಿ ಮೀಸಲಾತಿ ಸಂಬಂಧ ಪಟ್ಟಂತೆ ಸರ್ಕಾರವೇ ಇನ್ನೂ ಗೊಂದಲದಲ್ಲಿರುವ ಕಾರಣ ನಾನು ಈಗಲೇ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಒಕ್ಕಲಿಗರು 3ಎ ನಲ್ಲಿದ್ದವರನ್ನು 2ಸಿಗೆ ತಂದಿದ್ದಾರೆ, 3ಬಿನಲ್ಲಿ ಪಂಚಮಸಾಲಿಗನ್ನು 2ಡಿಗೆ ತಂದಿದಾರೆ ಇವರೇನು ಈ ಬದಲಾವಣೆಯನ್ನು ಕೇಳಿರಲಿಲ್ಲ. ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದಕ್ಕೆ ನನ್ನದೇನು ವಿರೋಧವಿಲ್ಲ ಆದರೆ ಇದೆಲ್ಲಾ ಜಾರಿಗೆ ಬರುವಂತೆ ಸಂವಿಧಾನ ತಿದ್ದುಪಡಿಯಾಗಬೇಕು. ಈ ಮೀಸಲಾತಿ ಕುರಿತಾಗಿ ಸಮಗ್ರ ಮಾಹಿತಿ ದೊರೆತ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.
ಮಹದಾಯಿ ನೊಟಿಫೀಕೇಶನ್ ಆಗಿರೋದು 27-02-2019ರಲ್ಲಿ ಇದುವರೆಗೆ ಡಿಪಿಆರ್ ಮಾಡೋದಕ್ಕೆ ಒಪ್ಪಿಗೆ ನೀಡದ ಬಿಜೆಪಿ ಸರ್ಕಾರ 2020ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಯ್ತು. ಅದಾದ ನಂತರ ಡಿಪಿಆರ್ ಮಾಡ್ಬಹುದಾಗಿತ್ತು. ಈಗ ಚುನಾವಣೆ ಹತ್ತಿರ ಬಂದಿದ್ದರಿಂದ ಡಿಪಿಆರ್ ಗೆ ಒಪ್ಪಿಗೆ ನೀಡಿದ್ದಾರೆ ಇದೆಲ್ಲಾ ಚುನಾವಣಾ ಗಿಮಿಕ್ ಹುಬ್ಬಳ್ಳಿ ಸಮಾವೇಶದಲ್ಲಿ ಇವುಗಳನ್ನೆಲ್ಲಾ ಜನರಿಗೆ ತಿಳಿಸುವುದಾಗಿ ಹೇಳಿದರು.