ಸುದ್ದಿ360 ದಾವಣಗೆರೆ ಜ.3: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಇತ್ತೀಚೆಗೆ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತಿಮ ವರ್ಷದ ಎಲ್ಲಾ ಅರ್ಹ ವಿದ್ಯಾರ್ಥಿ ಪಾಲ್ಗೊಂಡು ಕೊನೆಗೆ 20 ವಿದ್ಯಾರ್ಥಿಗಳು ಆಯ್ಕೆಯಾದರು. ಆಯ್ಕೆಯಾದ 20 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಟಿಸಿಎಚ್ ಡಿಜಿಟಲ್ ಮತ್ತು ಉಳಿದ 17 ವಿದ್ಯಾರ್ಥಿಗಳು ಟಿಸಿಎಸ್ ನಿಂಜ ಆಫರ್ ನೀಡಿವೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ. ಟಿಸಿಎಸ್ ಡಿಜಿಟಲ್ ಆಫರ್ ವಾರ್ಷಿಕ 7.5 ಲಕ್ಷ ರೂಗಳನ್ನು ಮತ್ತು ಟಿಸಿಎಸ್ ನಿಂಜ ಆಫರ್ ವಾರ್ಷಿಕ 3.5 ಲಕ್ಷ ರೂಗಳನ್ನು ನೀಡಿವೆ.
ಅನೇಕ ಪ್ರತಿಷ್ಠಿತ ಕಂಪನಿಗಳು ಈಗಾಗಲೇ ವಿದ್ಯಾರ್ಥಿಗಳನ್ನು ಸಂದರ್ಶನ ಪ್ರಕ್ರಿಯೆ ನಡೆಸಿ ಆಯ್ಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಟೆಕ್ ಮಹೇಂದ್ರ, ರೋಬೋ ಸಾಫ್ಟ್ ಟೆಕ್ನಾಲಜೀಸ್, ಕ್ವಾಲಿಟೆಸ್ಟ್, ಎಕ್ಸಾ ವೇರ್, ಆಫ್ಟಂ ಸಲ್ಯೂಷನ್ಸ್, ಎಸ್ ಎಲ್ ಕೆ ಸಾಫ್ಟ್ ವೇರ್ ಸರ್ವಿಸಸ್, ಡೆಲಾಯ್ಟ್, ಮುಂತಾದವುಗಳಾಗಿವೆ ಮತ್ತು ಇನ್ನೂ ಅನೇಕ ಕಂಪನಿಗಳು ಆಸಕ್ತಿಯನ್ನು ತೋರಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ ಎಂದು ಇದೆ ವೇಳೆ ತಿಳಿಸಿದರು.
ಸಿವಿಲ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಕಂಪನಿಗಳು ಫೆಬ್ರುವರಿ ತಿಂಗಳಿನ ನಂತರ ತಮ್ಮ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿವೆ ಎಂದು ಈಗಾಗಲೇ ಮನದಟ್ಟು ಮಾಡಿವೆ. ಈ ವಿಭಾಗಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳನ್ನು ಜಿಎಂಐಟಿ ಮುಂದಿನ ದಿನಗಳಲ್ಲಿ ಒದಗಿಸಲಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಆದ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ವೈಯೂ ಸುಭಾಷ್ ಚಂದ್ರ, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.