ಸುದ್ದಿ360 ದಾವಣಗೆರೆ ಜ.5: ಜಿಲ್ಲೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 14,05,710 ಮತದಾರರಿದ್ದು, 7,05,233 ಪುರುಷರು, 7,00,357 ಮಹಿಳೆಯರು ಸೇರಿ ಒಟ್ಟು 14,05,710 ಮತದಾರರಿದ್ದಾರೆ. ಈ ಹಿಂದೆ ನ.9ರಂದು ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 13,88,343 ಮತದಾರರಿದ್ದರು, ಪರಿಷ್ಕರಣೆ ಬಳಿಕ ಅಂತಿಮ ಪಟ್ಟಿಯಲ್ಲಿ 17,276 ಮತದಾರರ ಹೆಚ್ಚಳವಾಗಿದೆ. ಏಳು ವಿಧಾನಸಭೆ ಕ್ಷೇತ್ರಗಳಲ್ಲಿ 1683 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಒಬ್ಬರಂತೆ ಅಧಿಕಾರಿ (ಬಿಎಲ್ಒ) ಗಳನ್ನು ನೇಮಿಸಲಾಗಿದೆ. ಇವರೊಂದಿಗೆ 166 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಯುವ ಮತದಾರರ ವಿವರ
ಹಿಂದೆ ನ.9ರಂದು ಪ್ರಕಟಿಸಿದ್ದ ಕರಡು ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ 18-19 ವರ್ಷದೊಳಗಿನ ಒಟ್ಟು 9166 ಮತದಾರರಿದ್ದರು. ಬಳಿಕ ಚುನಾವಣಾ ಆಯೋಗ, ಸ್ವೀಪ್ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮಗಳ ಪರಿಣಾಮವಾಗಿ ಹೊಸ ಮತದಾರರ ಸೇರ್ಪಡೆ ಕಾರ್ಯಕ್ಕೆ ಚುರುಕು ದೊರೆತಿದ್ದು, 18 ಸಾವಿರಕ್ಕೂ ಅಧಿಕ ಹೊಸ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ. ಅದರಂತೆ, ಅಂತಿಮ ಪಟ್ಟಿಯಂತೆ ಜಿಲ್ಲೆಯಲ್ಲಿ 18-19 ವರ್ಷದೊಳಗಿನ ಒಟ್ಟು 23139 ಮತದಾರರಿದ್ದಾರೆ.