ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ

ಸುದ್ದಿ360 ಕಲಬುರಗಿ ಜ.6: ಜೀವನದಲ್ಲಿ ಜಿಗುಪ್ಸೆಗೊಂಡು ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಆಳಂದ ಪಟ್ಟಣದ ಬಸ್ ಡಿಪೋ ಬಳಿ ನಡೆದ ಘಟನೆಯಲ್ಲಿ ಸಿದ್ದು ಮಹಾಮಲ್ಲಪ್ಪಾ (35), ಹಾಗೂ ಮಕ್ಕಳಾದ ಶ್ರೇಯಾ (11), ಮನೀಶ್ (12) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಇಬ್ಬರು ಮಕ್ಕಳ ಮೃತದೇಹವನ್ನು ಶುಕ್ರವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದು,ಮೃತ ಮಕ್ಕಳ ತಂದೆಯ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟ ತಂದೆ ಮಕ್ಕಳು ಆಳಂದ ಪಟ್ಟಣದ ಶರಣ ನಗರ ನಿವಾಸಿಗಳಾಗಿದ್ದು,ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!