ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಕೇಸ್; ಪಿಡಿಒ‌ ಸೇರಿ 11ಜನರ ವಿರುದ್ಧ ಎಫ್ ಐಆರ್ ದಾಖಲು

ಸುದ್ದಿ೩೬೦ ದಾವಣಗೆರೆ, ಜ.೯: ಜಿಲ್ಲೆಯ ಜಗಳೂರಿನಲ್ಲಿ ಆರ್ ಟಿ ಐ ಕಾರ್ಯಕರ್ತ ಹಾಗೂ ಕರವೇ ತಾಲ್ಲೂಕು ಅಧ್ಯಕ್ಷ ಜಿ.ಪಿ.ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಿಂತೆ ಪೊಲೀಸರು ಪಿಡಿಒ ಸೇರಿದಂತೆ 11 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಪಿಡಿಓ ಎ.ಟಿ.ನಾಗರಾಜ್ ಸೇರಿ 11 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್, ದರ್ಶನ್ ಎಂಬುವರನ್ನು ಬಂಧಿಸಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ಹತ್ಯೆ ನಡೆದಿದೆ. ಶನಿವಾರ ರಾತ್ರಿ ಹೊಸಕೆರೆ ಡಾಬಾದಲ್ಲಿ ರಾಮಕೃಷ್ಣ ಮತ್ತು ಇತರರು ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ರಾಮಕೃಷ್ಣ, ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಪಿಡಿಒ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುತ್ತಿದ್ದರು.

Leave a Comment

error: Content is protected !!