ಡಬಲ್ ಎಂಜಿನ್ ಸರಕಾರವಲ್ಲ ಬೇಕಿರುವುದು ಹೊಸ ಎಂಜಿನ್ ಸರಕಾರ: ಕೇಜ್ರಿವಾಲ್

ಕರ್ನಾಟಕ ರಾಜ್ಯವನ್ನು ಭ್ರಷ್ಟಾಚಾರಮುಕ್ತಗೊಳಿಸಲು ಎಎಪಿಗೆ ಅಧಿಕಾರ ನೀಡುವಂತೆ ಕೇಜ್ರಿವಾಲ್ ಮನವಿ

ಸುದ್ದಿ360 ದಾವಣಗೆರೆ, ಮಾ.4: ಪರ್ಸಂಟೇಜ್ ಪಕ್ಷಗಳನ್ನು ಬದಿಗಿರಿಸಿ ಒಂದು ಬಾರಿ ಆಮ್ ಆದ್ಮಿ ಪಕ್ಷದ ಹೊಸ ಎಂಜಿನ್ ಆಡಳಿತಕ್ಕೆ ಅವಕಾಶ ನೀಡುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಹೊಸದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜನತೆಯಲ್ಲಿ ಮನವಿ ಮಾಡಿದರು.

ಕರ್ನಾಟಕದಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸುವ ನಿಮಿತ್ತ ಆಮ್ ಆದ್ಮಿ ಪಕ್ಷ, ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೇಜ್ರಿವಾಲ್, ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಭ್ರಷ್ಟಾಚಾರಿಗಳ ತೆಕ್ಕೆಯಲ್ಲಿದೆ. ಈಗ ಕರ್ನಾಟಕಕ್ಕೆ ಬೇಕಿರುವುದು ಡಬಲ್ ಎಂಜಿನ್ ಸರಕಾರವಲ್ಲ, ಬದಲಿಗೆ ‘ಹೊಸ ಎಂಜಿನ್ ಸರಕಾರ’ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.20 ಪರ್ಸೆಂಟ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಪ್ರಚಾರ ಮಾಡಿ, ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಾಗಿ ಹೇಳಿದ ಬಿಜೆಪಿ ಸರ್ಕಾರ ಕಮೀಶನ್ ಶೇ.20ರಿಂದ 40 ಪರ್ಸೆಂಟ್ ಗೆ ಏರಿಸಿ ಇನ್ನಷ್ಟು ಭ್ರಷ್ಟತೆಯಲ್ಲಿ ತೊಡಗಿಸಿಕೊಂಡಿತು. ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದ್ದೇ ಆದಲ್ಲಿ ಇದು 80 ಪರ್ಸೆಂಟ್ ಹಾಗೇ ಮುಂದೆ 100 ಪರ್ಸೆಂಟ್ ಕೂಡ ಆಗಬಹುದು ಎಂದು ಎಚ್ಚರಿಸಿದರು.

ಆಮ್ ಆದ್ಮಿ ಪಕ್ಷಕ್ಕೆ  ಅಧಿಕಾರ ನೀಡಿದ್ದೇ ಆದಲ್ಲಿ, ಈಗ ದೆಹಲಿಯಲ್ಲಿ ನೀಡಿರುವಂತೆಯೇ ಎಲ್ಲ ಉಚಿತ ಸೌಲಭ್ಯಗಳ ಜತೆ ಭ್ರಷ್ಟಾಚಾರ ಮುಕ್ತ ಸರಕಾರ ನೀಡುವುದಾಗಿ ಭರವಸೆ ನೀಡಿದರು.

admin

admin

Leave a Reply

Your email address will not be published. Required fields are marked *

error: Content is protected !!