ಮಾ.10,11 ರಂದು ದಾವಣಗೆರೆ ಜಿಲ್ಲೆಯಲ್ಲಿ ‘ಪ್ರಜಾಧ್ವನಿ’ – ಸಿದ್ಧರಾಮಯ್ಯ ಭಾಗಿ

ಸುದ್ದಿ360 ದಾವಣಗೆರೆ: ಜನರನ್ನು ಜಾಗೃತಿಗೊಳಿಸುವ ಪ್ರಜಾಧ್ವನಿ ಯಾತ್ರೆ ಈಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರಾರಂಭಗೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ 10 ಮತ್ತು 11 ರಂದು ನಡೆಯಲಿದೆ ಎಂದು ಕಾಂಗ್ರೆಸ್‍ ಜಿಲ್ಲಾ ಘಟಕದ ಅಧ್ಯಕ್ಷ  ಎಚ್. ಬಿ. ಮಂಜಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಎಂ. ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಸೇರಿದಂತೆ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಬಸವರಾಜ್ ರಾಯರೆಡ್ಡಿ, ಜಮೀರ್ ಅಹಮದ್ ಹಾಗೂ  ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾ.10ರ ಬೆಳಿಗ್ಗೆ 10 ಗಂಟೆಗೆ ಚನ್ನಗಿರಿ, 4 ಗಂಟೆಗೆ ಬಸವಪಟ್ಟಣ, ಸಂಜೆ 6 ಗಂಟೆಗೆ ಜಗಳೂರಿನಲ್ಲಿ ಹಾಗೂ ಮರುದಿನ ಮಾ.11 ರ ಬೆಳಿಗ್ಗೆ11 ಗಂಟೆಗೆ ಹೊನ್ನಾಳಿ, 3.30ಕ್ಕೆ ಹರಿಹರ, ಸಂಜೆ 6ಕ್ಕೆ ರಾಣೆಬೆನ್ನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಎಂದು ಎಚ್.ಬಿ. ಮಂಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಿನೇಶ್‍ ಕೆ ಶೆಟ್ಟಿ, ಎ ನಾಗರಾಜ್, ಅನಿತಾಬಾಯಿ ಮಾಲತೇಶ್ , ಸುಷ್ಮಾ ಪಾಟೀಲ್, ಆಯೂಬ್ ಪೈಲ್ವಾನ್, ಪ್ರಕಾಶ್ ಪಾಟೀಲ್, ಮಲ್ಲಿಕಾರ್ಜುನ್, ಕೆ.ಜಿ. ಶಿವಕುಮಾರ್, ಮೊಹಮ್ಮದ್ ಜಿಕ್ರಿಯಾ, ಮೈನುದ್ದೀನ್ ಇತರರು ಇದ್ದರು.

Leave a Comment

error: Content is protected !!