ಸುಮಲತಾ ಅಂಬರೀಶ್ ಬಿಜೆಪಿ ಸೇರುವುದು ಬಹುತೇಕ ಖಚಿತ

ಸುದ್ದಿ360 ಬೆಂಗಳೂರು, ಮಾ.09: ಮಂಡ್ಯದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಒಲವು ಹೊಂದಿರುವ  ಮಂಡ್ಯ ಸಂಸದೆ ಸುಮಲತಾ ಅವರು ನಾಳೆ ಅಧಿಕೃತವಾಗಿ ಬಿಜೆಪಿ ಸೇರುವ ಸಾಧ್ಯತೆ ಇದೆ.

ನಾಳೆ ಮಾ.10ರಂದು ಸುಮಲತಾ ಅಂಬರೀಶ್ ಮಹತ್ವದ ಪತ್ರಿಕಾಗೋಷ್ಟಿ ಕರೆದಿದ್ದಾರೆ. ಇದರಲ್ಲಿ ಸುಮಲತಾ ಅಧಿಕೃತವಾಗಿ ತಮ್ಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತು ಅವರ ಆಪ್ತರಾಗಿರುವ ಸಚ್ಚಿದಾನಂದ ಸೇರಿದಂತೆ ಹಲವು ನಾಯಕರು ಈ ಸುಳಿವು ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಈ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಆ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದು, ನಾಳೆ ಈ ಕುರಿತ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವ ಸೂಚನೆ ಇದೆ.

Leave a Comment

error: Content is protected !!